janadhvani

Kannada Online News Paper

ಬಾಗಲಕೋಟೆ: SSF ಅಮೀನಗಡ ಶಾಖೆಯ ವತಿಯಿಂದ ‘ತಾರೀಖೇ ಅಂಬಿಯಾ’ ಕಾರ್ಯಕ್ರಮ

ಬಾಗಲಕೋಟೆ: SSF ಅಮೀನಗಡ ಶಾಖೆಯ ವತಿಯಿಂದ ತಾರೀಖೇ ಅಂಬಿಯಾ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು “ಉರ್ದು ಇಸ್ಲಾಮಿಕ್ ಮೀಡಿಯಾ” ಎಂಬ ಯೂಟೂಬ್ ಚಾನೆಲ್ ಮೂಲಕ ಮುಹಮ್ಮದ್ ಮುನೀರ್ ಹಿಮಮಿ ಕಬಕ ರವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿದೆ. ಹಲವಾರು ಜನರು ಅಂಬಿಯಾಗಳ ಚರಿತ್ರೆಗಳನ್ನು ಕಲಿಯಲು ಪ್ರಸ್ತುತ ಕಾರ್ಯಕ್ರಮ ಸಹಾಯಕವಾಗಲಿದೆ.

ಬಾಗಲಕೋಟೆ ಜಿಲ್ಲೆಯ ಅಮೀನಗಡದ SSF ಉಸ್ತುವಾರಿಯಾಗಿ ಅಬ್ದುರ್ರಝಾಕ್ ಬೆಂಗಳೂರು, ಅಧ್ಯಕ್ಷರಾಗಿ ಶಕೀಲ್ ಬೇಪಾರಿ ಅಮೀನಗಡ, ಉಪಾಧ್ಯಕ್ಷರಾಗಿ ಸಯ್ಯಿದ್ ಫರ್ಹಾನ್ ಖಾದಿರಿ ಅಮೀನಗಡ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಖಡಿವಾಳ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಇಲ್ಯಾಸ್ ಪೀರ್ ಝಾದೆ ಅಮೀನಗಡ ಇತ್ತೀಚೆಗೆ ಆಯ್ಕೆ ಆಗಿದ್ದರು. ತಾರೀಖೇ ಅಂಬಿಯಾ ಕಾರ್ಯಕ್ರಮ ವೀಕ್ಷಿಸಲು Urdu Islamic Media ಯೂಟೂಬ್ ಚಾನೆಲ್ ವೀಕ್ಷಿಸಿ.