ಉಜಿರೆ :ಅಸ್ಸಯ್ಯದ್ ಉಜಿರೆ ತಂಙಳ್ ಸಾರಥ್ಯದ ಮಲ್‌ಜಅ್ ಸಂಸ್ಥೆಯ ಮಾಸಿಕ ದ್ಸಿಕ್ರ್ ಸ್ವಲಾತ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ತಂಙಳ್ ಅಲ್-ಹಾದಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಾವುಲ್ಲಾ ಹಿಮಮಿ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಯು.ಎ.ಇ ನ್ಯಾಷನಲ್ ಪ್ರೊಫೆಷನಲ್ ವಿಭಾಗದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಜನಾಬ್ ರಜಬ್ ಉಚ್ಚಿಲ ಮತ್ತು ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ಅಹ್ಮದ್ ಬಶೀರ್ ಕಾವೂರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಲ್‌ಜಅ್ ಮುದರ್ರಿಸರುಗಳು ಮತ್ತು ಹಲವಾರು ಅತಿಥಿಗಳು ಉಪಸ್ಥಿತರಿದ್ದರು.