ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ ಮನ್ಸೂರ್ ಮುಲ್ಕಿಯವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.
ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.

ಚಿಕಿತ್ಸೆ ಫಲಿಸದೆ 26/01/2025ರಂದು ಮರಣ ಹೊಂದಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ .
ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ರಿಯಾದ್ ಕೆಸಿಎಫ್ ಸಾಂತ್ವನ ಇಲಾಖೆ ನಾಯಕರಾದ ಮಜೀದ್ ವಿಟ್ಲ, ಸಲಾಂ ಹಳೆಯಂಗಡಿ, ಅಶ್ರಫ್ KMS, ಮೃತರ ಕುಟುಂಬಸ್ಥರಾದ ಜಾಫರ್ ಹಾಗೂ ಇನ್ನಿತರರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ಊರಿನಲ್ಲಿ ಮೃತರ ಕುಟುಂಬಸ್ಥರು ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ.
ರಿಯಾದಿನ ಅಲ್ ರಾಜಿ ಮಸ್ಜಿದ್‌ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಅಲ್-ನಸೀಮ್ ಸಾರ್ವಜನಿಕ ದಫನ ಭೂಮಿಗೆ ಮೃತದೇಹವನ್ನು ಕೊಂಡೊಯ್ಯಲಾಯಿತು.
ನಸೀಂನಲ್ಲಿ ನಡೆದ ದಫನ್ ಕಾರ್ಯದ ನೇತೃತ್ವವವನ್ನು ಕೆಸಿಎಫ್ ರಿಯಾದ್ ಝೋನ್ ದಾಇ ಮುಸ್ತಫಾ ಸಅದಿ ಮತ್ತು ಮೃತರ ಬಾವ ಇಕ್ಬಾಲ್ ಸಅದಿ ವಹಿಸಿದ್ದರು. ಝೋನ್ ಅಧ್ಯಕ್ಷರಾದ ಹಂಝ ಉಸ್ತಾದ್ ಚೋಕಂಡಳ್ಳಿ (ಕೊಡಗು), ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಹಳೆಯಂಗಡಿ, ಮೃತರು ದುಡಿಯುತ್ತಿದ್ದ ಸಂಸ್ಥೆಯ ಮಾಲೀಕರಾದ ಸಿರಾಜುದ್ದೀನ್ ಕಣ್ಣಂಗಾರ್, ಕೆಸಿಎಫ್ ನಾಯಕರಾದ ನಝೀರ್ ಹಾಜಿ ಕಾಶಿಪಟ್ಣ, ಶಿಹಾಬುದ್ದೀನ್ ಸಖಾಫಿ, ದಾವೂದ್ ಸಅದಿ, ಇಸ್ಮಾಯಿಲ್ ಮದನಿ, ಅಶ್ರಫ್ ಗುರುಪುರ,ಫಾರೂಕ್ ಪಾಣೆಮಂಗಳೂರು, ಫಾರಿಸ್ ಕೂಳೂರು, ಹಮೀದ್ ಮಠ ಸೇರಿದಂತೆ ಕೆಸಿಎಫ್ ರಾಷ್ಟ್ರೀಯ, ಝೋನ್ ನಾಯಕರು, ಕಾರ್ಯಕರ್ತರು, ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೃತರು ಪತ್ನಿ, ಮೂರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್