ಪುತ್ತೂರು : ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ತುರ್ಕಳಿಕೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಜನವರಿ 22 ರಿಂದ 26 ವರೆಗೆ ನಡೆಯಲಿದೆ ಎಂದು ತುರ್ಕಳಿಕೆ ಜಮಾಅತ್ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಅಲಿ ತಿಳಿಸಿದರು. ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜ.22 ರಿಂದ 26 ರವೆರೆಗಿನ ಐದು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಹಾಗೂ ಮದನೀಯಂ ಮಜ್ಲಿಸ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಯ್ಯಿದ್ ಸಾದಾತ್ ತಂಙಳ್, ಸಯ್ಯಿದ್ ಮುತ್ತನ್ನೂರ್ ತಂಙಳ್, ಸಯ್ಯಿದ್ ಬಾಯಾರ್ ತಂಙಳ್, ಸಯ್ಯಿದ್ ಮಸ್ಹೂದ್ ತಂಙಳ್ ಕೂರತ್ ಹಾಗೂ ಇನ್ನಿತರ ಉಲಮಾ ನೇತಾರರು ಭಾಗವಹಿಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ಅಯ್ಯೂಬ್ ಕುದೂರು, ಸ್ಥಳೀಯ ಖತೀಬ್ ಹಮೀದ್ ಸಖಾಫಿ, ಕೋಶಾಧಿಕಾರಿ ರಶೀದ್ ಜಿ.ಕೆ, ಉಪಾಧ್ಯಕ್ಷ ಲತೀಫ್ ಸಖಾಫಿ ಭಾಗವಹಿಸಿದ್ದರು.