janadhvani

Kannada Online News Paper

ಖತಾರ್ ನ ಉಮ್ರಾ ಯಾತ್ರಾರ್ಥಿಗಳಿಗೆ ಯಾವುದೇ ನಿರ್ಬಂಧವಿಲ್ಲ – ಸೌದಿ ಸರಕಾರ

ದೊಹಾ: ಸೌದಿಯು ಖತರ್‌ ದೇಶೀಯರಿಗೆ ಉಮ್ರಾ ನಿರ್ವಹಿಸಲು ಆಹ್ವಾನ ನೀಡಿದೆ. ಯಾತ್ರಾರ್ಥಿಗಳು ಸೌದಿಗೆ ಜಿದ್ದಾ ವಿಮಾನ ನಿಲ್ದಾಣದ ಮೂಲಕ ಖತರ್ ದೇಶೀಯರು ತಲುಪಬೇಕು. ಸೌದಿ ಮತ್ತು ಖತರ್ ನಡುವೆ ದಿಗ್ಭಂಧನ ಏರ್ಒಡಿಸಿರುವ ಹೊರತಾಗಿಯೂ ಈ ಆಹ್ವಾನ ನೀಡಿದೆ. ಖತರ್‌ ದೇಶೀಯರು ಅಥವಾ ವಿದೇಶಿಯರಿಗೆ ಉಮ್ರಾ ನಿರ್ವಹಿಸಲು ಯಾವುದೇ ತಡೆ ಇಲ್ಲ ಎಂದು ಸೌದಿ ಹಜ್ ಉಮ್ರಾ ಸಚಿವಾಲಯ ಹೇಳಿದೆ.

ಖತರ್ ಮತ್ತು ಸೌದಿ ನಡುವಿನ ಅಭಿಪ್ರಾಯ ವ್ಯತ್ಯಾಸಗಳು ಉಮ್ರಾ ಯಾತ್ರಿಕರ ಮೇಲೆ ಪರಿಣಾಮ ಬೀರುವುದಿಲ್ಲ. ಖತರ್ ನಾಗರಿಕರು ನೇರವಾಗಿ ಜಿದ್ದಾ ವಿಮಾನ ನಿಲ್ದಾಣದಲ್ಲಿ ನೋಂದಾಯಿಸಿ, ಮಕ್ಕಾಗೆ ತೆರಲಿ ಉಮ್ರಾವನ್ನು ನಿರ್ವಹಿಸಬಹುದು. ಖತರ್ ನಲ್ಲಿರುವ ವಿದೇಶಿಯರು ಅಧಿಕೃತ ಉಮ್ರಾ ಸೇವಾ ಕಂಪೆನಿಗಳ ಮೂಲಕ ಉಮ್ರಾ ಪ್ಯಾಕೇಜ್ ಅನ್ನು ಬುಕ್ ಮಾಡಬೇಕಾಗುತ್ತದೆ. ಸಚಿವಾಲಯದ ವೆಬ್ ಸೈಟ್ ಮೂಲಕ ಪ್ಯಾಕೇಜ್ ಆಯ್ಕೆ ಮಾಡಲು ಅವಕಾಶವಿದೆ. ಖತರ್ ನಲ್ಲಿರುವ ವಿದೇಶಿಗರು ಈ ವೆಬ್‌ಸೈಟ್ haj.gov.sa ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಖತಾರ್ ಏರ್ವೇಸ್ ಅಲ್ಲದ ಯಾವುದೇ ವಿಮಾನಗಳ ಮೂಲಕ ಜಿದ್ದಾಕ್ಕೆ ತಲುಪಬಹುದು ಎಂದು ಸಚಿವಾಲಯ ತಿಳಿಸಿದೆ. ಇತರ ಯಾತ್ರಾರ್ಥಿಗಳಿಗೆ ಲಭಿಸುವ ಎಲ್ಲಾ ಸೌಲಭ್ಯಗಳನ್ನು ಕತರ್‌ನ ಯಾತ್ರಿಕರಿಗೂ ನೀಡಲಾಗುವುದು ಎಂದು ಸಚಿವಾಲಯ ದೃಢಪಡಿಸಿದೆ.
ಸೌದಿ ಅರೇಬಿಯಾದಲ್ಲಿ, ಸೌದಿ ಅರೇಬಿಯಾವು ಕಳೆದ ಹಜ್ ವೇಳೆಯೂ ಅಭಿಪ್ರಾಯ ವ್ಯತ್ಯಾಸಗಳನ್ನು ಬದಿಗಿರಿಸಿ ಖತರ್ ಪ್ರಜೆಗಳಿಗೆ ಆಹ್ವಾನವನ್ನು ನೀಡಿತ್ತು.

error: Content is protected !! Not allowed copy content from janadhvani.com