janadhvani

Kannada Online News Paper

ಬಹ್ರೈನ್ ನಲ್ಲೂ 10 ವರ್ಷಗಳ ವೀಸಾ ನೀಡಲು ನಿರ್ಧಾರ

ಮನಾಮಾ: ಅಂತರ್‌ರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸಲು ಗಲ್ಫ್ ರಾಷ್ಟ್ರಗಳು ವೀಸಾ ನಿಯಮಗಳನ್ನು ಉದಾರಗೊಳಿಸುತ್ತಿದೆ.
ಈ ಹಿಂದೆ ಯುಎಇಯು ವಿದೇಶಿ ಹೂಡಿಕೆದಾರರು ಮತ್ತು ಪರಿಣಿತ ಕಾರ್ಮಿಕರಿಗೆ ಹತ್ತು ವರ್ಷಗಳ ವೀಸಾ ಅನುಮತಿಸಲು ನಿರ್ಧರಿಸಿದ್ದವು. ಇದೀಗ ಬಹ್ರೈನ್ ಕೂಡ ಈ ಮಾರ್ಗವನ್ನು ಅನುಸರಿಸುತ್ತಿದೆ.

ಬಹ್ರೈನ್ ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರಿಗೆ 10 ವರ್ಷಗಳವರೆಗೆ ವೀಸಾಗಳನ್ನು ನೀಡಲು ನಿರ್ಧರಿಸಿದೆ. ದೇಶಕ್ಕೆ ತಲುಪುವವರಿಗೆ ತಮ್ಮ ಪ್ರಾಯೋಜಕತ್ವದಲ್ಲಿಯೇ ಉಳಿಯಬಹುದು. ಬಹ್ರೈನ್‌ನ ರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಈ ಶಾಸನಕ್ಕೆ ಸಂಬಂಧಿಸಿದಂತೆ ಕಾರ್ಯಗತರಾಗುವಂತೆ ಮಂತ್ರಿ ಮಂಡಳಕ್ಕೆ ಸೂಚಿಸಿದ್ದಾರೆ.

ಪ್ರಸ್ತುತ ಬಹ್ರೇನ್ನಲ್ಲಿ ಸೇವೆ ಸಲ್ಲಿಸುತ್ತಿರುವ ವಿದೇಶಿಯರಿಗೆ ಅಲ್ಪಾವಧಿಯ ವೀಸಾವನ್ನು ಉದ್ಯೋಗದಾತರ ಮೂಲಕ ಅನುಮತಿ ನೀಡಲಾಗುತ್ತದೆ. ಕನಿಷ್ಠ ಮೂರು ವರ್ಷಗಳವರೆಗೆ ಮಾತ್ರ ಈಗ ವೀಸಾ ಮಾನ್ಯವಾಗಿರುತ್ತದೆ.

ತೈಲ ಮಾರುಕಟ್ಟೆಯಲ್ಲಿನ ಬಿಕ್ಕಟ್ಟನ್ನು ಗುರುತಿಸಿ ಇತರ ವಲಯಗಳತ್ತ  ಗಲ್ಫ್ ರಾಷ್ಟ್ರಗಳು ಗಮನ ಹರಿಸುವ ಭಾಗವಾಗಿ ಈ ನಡೆ ಎನ್ನಲಾಗಿದೆ. ಯುಎಇ ಮತ್ತು ಬಹ್ರೈನ್ ನಂತರ, ಇತರ ದೇಶಗಳು ಕೂಡ ವಿದೇಶಿ ಬಂಡವಾಳವನ್ನು ಆಕರ್ಷಿಸುವ ನಿರೀಕ್ಷೆಯಿದೆ.

error: Content is protected !! Not allowed copy content from janadhvani.com