janadhvani

Kannada Online News Paper

ಇಂದು ಕೈಕಂಬದಲ್ಲಿ ಪೋಸೊಟು ತಂಙಳ್ ಅನುಸ್ಮರಣಾ ಸಂಗಮ

ಗುರುಪುರ ,ಕೈಕಂಬ ಸುನ್ನೀ ಸಂಘ ಕುಟುಂಬಗಳಾದ SJU,KMJ, SJM ,SMA SYS,SSF, ಮೂಡಬಿದ್ರೆ ಡಿವಿಷನ್ /ಝೊನ್ ಇದರ ಸಂಯಕ್ತ ಆಶ್ರಯದಲ್ಲಿ ಸಮುದಾಯ ಕಂಡ ಅತ್ಯುನ್ನತ ನಾಯಕರೂ,ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಖಾಝಿಯೂ ಆಗಿದ್ದ
ಮರ್ಹೂಂ ಖಾಝಿ ಶೈಖುನಾ ಅಸ್ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ – ಬುಖಾರಿ ಪೊಸೋಟ್ ತಂಙಳ್ ಅನುಸ್ಮರಣೆ ಹಾಗೂ ಉರೂಸ್ ಪ್ರಚಾರ ಸಂಗಮ ಇಂದು ಮಗ್ರಿಬ್ ನಮಾಝಿನ ಬಳಿಕ ಮರ್ಕಝ್ ಕೈಕಂಬದಲ್ಲಿ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಹಲವಾರು ಉಲಮಾ , ಉಮರಾ ನಾಯಕರು ಭಾಗವಸಲಿದ್ದು ಪ್ರತ್ಯೇಕವಾಗಿ ಮಲ್ಹರ್ ಸಂಸ್ಥೆಯ ಪ್ರಾಂಶುಪಾಲರಾದ – ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ಭಾಗವಹಿಸಲಿದ್ದಾರೆ ಎಂದು ಸುನ್ನೀ ಸಂಘ ಕುಟುಂಬದ ಪ್ರಧಾನ ನಿರ್ದೇಶಕರೂ, ಕೆಸಿಎಫ್ ರಾಷ್ಟ್ರೀಯ ನಾಯಕರೂ ಆದ ಅಬ್ದುಲ್ ರಹೀಂ ಸಅದಿ ಕತ್ತರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com