ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಉಜಿರೆ ಸರ್ಕಲ್ ವಾರ್ಷಿಕ ಕೌನ್ಸಿಲ್ ದಿನಾಂಕ 25/6/2024 ಬದ್ರಿಯಾ ಜುಮಾ ಮಸ್ಜಿದ್ ಹಾಲ್ ನಿಡಿಗಲಿನಲ್ಲಿ ಸಲೀಂ ಕನ್ಯಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
SYS ಮುಂಡಾಜೆ ಸರ್ಕಲ್ ಅಧ್ಯಕ್ಷರಾದ ಮುಸ್ತಫಾ ಸಅದಿ ಸಭೆಯನ್ನು ಉದ್ಘಾಟಿಸಿದರು.
ಪ್ರಸ್ತುತ ಸಭೆಯಲ್ಲಿ ಕಾರ್ಯದರ್ಶಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಪ್ರಸ್ತುತ ಸಭೆಯಲ್ಲಿ SYS ಬೆಳ್ತಂಗಡಿ ಝೋನ್ ವೀಕ್ಷಕರಾಗಿ ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ ಸದಸ್ಯರಾದ ಅಶ್ರಫ್ ಮುಂಡಾಜೆ,ಅಝೀಝ್ ಕಾಜೂರು ಭಾಗವಹಿಸಿದರು.
ಝೋನ್ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಮಾಚಾರು ಹಾಗೂ ಕೆಸಿಎಫ್ ನಾಯಕರಾದ ಅಶ್ರಫ್ ಉಜಿರೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಹನೀಫ್ ಮುಸ್ಲಿಯಾರ್ ನಿಡಿಗಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶುಭಾಶಂಸೆ ನಡೆಸಿದರು.
ಮುಹಮ್ಮದ್ ಯಾಸರ್ ಫಾಲಿಳಿ ಅಲ್ ಪುರ್ಖಾನಿ ಸಂಘಟನಾ ತರಗತಿ ನೆರವೇರಿಸಿದರು.
ಖಬೀರ್ ಮಿಸ್ಬಾಹಿ ಮಾಚಾರು ಸ್ವಾಗತಿಸಿ ಹಾತಿಬ್ ಉಜಿರೆ ಧನ್ಯವಾದ ಸಮರ್ಪಿಸಿದರು.