janadhvani

Kannada Online News Paper

ಜೂ.11ಕ್ಕೆ ಉಜಿರೆ “ಮಲ್‌ಜಅ್”ನಲ್ಲಿ ರಂಝಾನ್ ಪ್ರಾರ್ಥನಾ ಸಮ್ಮೇಳನ

ಕಾಶಿಬೆಟ್ಟು: ಮಲ್‌ಜಅ್ ದಅವಾ ಮತ್ತು ರಿಲೀಫ್ ಸೆಂಟರ್‌ನ ಕ್ಯಾಂಪಸ್‌ನಲ್ಲಿ ಜೂ.11 ಸೋಮವಾರದಂದು ಮೂರನೇ ವರ್ಷದ ರಂಝಾನ್ ಪ್ರಾರ್ಥನಾ ಸಮ್ಮೇಳನ ನಡೆಯಲಿದೆ ಎಂದು ಸಂಸ್ಥೆಯ ಚೇರ್‌ಮೆನ್ ಉಜಿರೆ ತಂಙಳ್, ಕಾರ್ಯಾಧ್ಯಕ್ಷ ಲತೀಫ್ ಹಾಜಿ ಎಸ್‌ಎಮ್‌ಎಸ್, ಸಂಸ್ಥೆಯ ಪಿಆರ್‌ಒ ಶರೀಫ್ ಬೆರ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಝಾನ್ ನ  ಸಂಭವನೀಯ “ಲೈಲತುಲ್ ಕದ್ರ್” ದಿನದಂದು ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು ಆಹೋರಾತ್ರಿ ಸಾಮೂಹಿಕ ಆರಾಧನೆಯಲ್ಲಿ ಭಾಗಿಯಾಗುವ ಅವಕಾಶ ಒದಗಿಸಲಾಗಿದೆ.
ಸಾಮೂಹಿಕ ಇಫ್ತಾರ್ ಕೂಟ, ಇಬಾದತ್ ಇಜ್ತಿಮಾ, ಮಾಸಿಕ ದಿಕ್ರ್ ಸ್ವಲಾತ್ ಮಜ್ಲಿಸ್, ಸಾಮೂಹಿಕ ಪ್ರಾರ್ಥನೆ, ಗ್ರ್ಯಾಂಡ್ ಇಫ್ತಾರ್ ಮೀಟ್, ಆತ್ಮೀಯ ಬೋಧನೆ, ಆಧ್ಯಾತ್ಮಿಕ ಸಂಗಮ ಇತ್ಯಾದಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ದ. ಕ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಕೇರಳದ ಮಂಜೇಶ್ವರ ಮತ್ತು ಕಾಸರಗೋಡು ಭಾಗದಿಂದ ಭಕ್ತಿ ಬಯಸುವವರು ಆಗಮಿಸಲಿದ್ದಾರೆ.ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿಗೆ ಆಸನ, ಆಹಾರ ವ್ಯವಸ್ಥೆ, ಆರಾಧನೆಗೆ ಬೇಕಾದ ಏರ್ಪಾಟು ಮಾಡಲಾಗಿದೆ.

ಸಾದಾತ್, ಉಲಮಾ, ಉಮರಾ ನಾಯಕರ ಅಪೂರ್ವ ಸಂಗಮ
ಇಫ್ತಾರ್ ಮೀಟ್ ಮತ್ತು ಇತರ ಎಲ್ಲಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಮಂದಿ ಸಾದಾತುಗಳು, ಉಲಮಾ ಉಮರಾ ನಾಯಕರು ಭಾಗಿಯಾಗಲಿದ್ದು, ಸಾಮೂಹಿಕ ಇಫ್ತಾರ್ ಕೂಟದಲ್ಲಿ ಸಮಾನವಾಗಿ ಭಾಗಿಯಾಗಿ ಘನತೆ ಹೆಚ್ಚಿಸಲಿದ್ದಾರೆ.

ಸುನ್ನೀ ಸಮೂಹ ಸಂಘಟನೆಗಳಿಂದ ಸಂಪೂರ್ಣ ಸಹಕಾರ

ಕಾರ್ಯಕ್ರಮ ಯಶಸ್ವಿಗಾಗಿಈಗಾಗಲೇ ರಚಿತವಾಗಿರುವ ಸಮಿತಿ, ಮತ್ತು ಎಲ್ಲಾ ಉಪ ಸಮಿತಿ ಪದಾಧಿಕಾರಿಗಳು ಪ್ರತ್ಯೇಕ ಸಭೆಗಳನ್ನು ನಡೆಸಿ ಕ್ರಿಯಾಯೋಜನೆ ತಯಾರಿಸಿಕೊಂಡು ಮುಂದುವರಿಯುತ್ತಿದ್ದಾರೆ. ಸಂಘಟನೆಯ ಶಾಖೆಗಳಿಂದಲೂ ಎಲ್ಲರೂ‌ ಭಾಗಿಯಾಗುವಂತೆ ಸುತ್ತೋಲೆಗಳನ್ನು ಹೊರಡಿಸಿದ್ದಾರೆ.

ಪ್ರಸ್ತುತ  ಸೌದಿ ಅರೇಬಿಯಾದಲ್ಲಿರುವ ಉಜಿರೆ ತಂಙಳ್ ಅವರು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದು ಮಾರ್ಗದರ್ಶನ ನೀಡುತ್ತಿದ್ದಾರೆ,ಶನಿವಾರ ಅವರು ಸ್ವದೇಶಕ್ಕೆ ಮರಳಲಿದ್ದು ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಲಿದ್ದಾರೆ.

ಸರ್ವರಿಗೂ ಆಹ್ವಾನ
ಈ ಕಾರ್ಯಕ್ರಮದಲ್ಲಿ ಐದು ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ನಡೆಸಲಾಗಿದೆ. ಎಲ್ಲ ಜಮಾಅತ್ ಬಾಂಧವರು, ಉಸ್ತಾದರು, ಸುನ್ನೀ ಸಂಘ ಕುಟುಂಬದವರು ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಉಜಿರೆ ತಂಙಳ್ ಕೇಳಿಕೊಂಡಿದ್ದಾರೆ.

ದೇಶ ವಿದೇಶಗಳಿಂದಲೂ ಪ್ರೋತ್ಸಾಹ
ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದಲೂ ಸಹಕಾರ, ಪ್ರೋತ್ಸಾಹ ದೊರೆಯುತ್ತಿದ್ದು ಸಂತಸ ವ್ಯಕ್ತವಾಗಿದೆ. ಜನರಲ್ ಮೆನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ ಅವರು ವಿದೇಶ ರಾಷ್ಟ್ರಗಳ ಪ್ರವಾಸದಲ್ಲಿದ್ದು ಪ್ರಚಾರ ಕಾರ್ಯಕ್ರಮದ, ಸಂಸ್ಥೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳಿಗಾಗಿ ತರಬೇತಿ
ಸ್ವಯಂ ಸೇವಕರ ತಂಡ ರಚಿಸಲಾಗಿದೆ,  ಕಾರ್ಯಕ್ರಮವು  KSOCRMedia ದಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com