janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಮಂಗಳೂರು:ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಕೊಲೆಯಾದ ದನದ ವ್ಯಾಪಾರಿ ಜೋಕಟ್ಟೆ ಹುಸೈನಬ್ಬರವರ ಕೊಲೆಯಲ್ಲಿ ಜನ ಸಾಮಾನ್ಯರ ರಕ್ಷಣೆ ಮಾಡಬೇಕಾದ ಪೋಲೀಸರೇ ಕೊಲೆಗಾರರಾಗಿ ಬಂಧಿಸಲ್ಪಟ್ಟ ಸುದ್ದಿ ಬಹಳ ಆತಂಕ ಸೃಷ್ಟಿ ಮಾಡಿದೆ.

ಕೊಲೆಗಾರರ ಉಪಟಳದಿಂದ ಬಡಪಾಯಿ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕಾದವರೇ ಕೊಲೆಗಾರರಾಗಿರುವುದು ತೀವ್ರ ಖಂಡನೀಯವಾಗಿದೆ.
ಈ ರೀತಿಯ ಅವಸ್ಥೆ ಮುಂದುವರಿಯುವುದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ಕ್ಕೆ ಒಂದು ಕಪ್ಪು ಚುಕ್ಕೆ ಯಾಗಲಿದೆ.

ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸಿ ಸಮಾಜದ ಪ್ರಶಂಸೆಗೆ ಪಾತ್ರರಾದ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ನಮ್ಮ ಸಮಿತಿಯ ವತಿಯಿಂದ ಕೃತಜ್ಞತೆಗಳು ಸಲ್ಲಿಸಿತ್ತಾ,ಈ ಪ್ರಕರಣದಲ್ಲಿ ಭಾಗಿಯಾದ ಪೋಲೀಸರನ್ನು ಶಾಸ್ವತವಾಗಿ ಅವರ ಸೇವೆಯಿಂದಲೇ ವಜಾ ಮಾಡುವಂತೆ SYS ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷರು ಪಿ.ಎ ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಪ್ರ. ಕಾರ್ಯದರ್ಶಿ ಅಶ್ರಪ್ ಕಿನಾರ ಜಂಟಿ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com