ರಿಯಾದ್: ಸೌದಿ ಅರೇಬಿಯಾದಲ್ಲಿ ದುಲ್ ಹಿಜ್ಜಾ ತಿಂಗಳ ಚಂದ್ರ ಗೋಚರಿಸಿದೆ. ಕೊಲ್ಲಿಯಲ್ಲಿ ಜೂನ್ 16 ರಂದು ಈದ್ ಅಲ್-ಅದ್’ಹಾ ಆಚರಣೆ. ನಾಳೆ ಶುಕ್ರವಾರ ದುಲ್ ಹಜ್ ತಿಂಗಳ ಮೊದಲ ದಿನ ಎಂದು ಸೌದಿ ಸುಪ್ರೀಂ ಕೋರ್ಟ್ ಘೋಷಿಸಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ನ ಕೊನೆಯ ತಿಂಗಳಾದ ದುಲ್ ಹಜ್ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಇಸ್ಲಾಮಿಕ್ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಪವಿತ್ರ ಹಜ್ ಕರ್ಮದ ಪ್ರಮುಖ ಭಾಗವಾಗಿರುವ ಅರಫಾ ದಿನವನ್ನು ದುಲ್ ಹಜ್ 9 (ಜೂನ್ 15) ರಂದು ಆಚರಿಸಲಾಗುತ್ತಿದೆ, ಅಂದು ಹಜ್ಜಾಜ್‌ಗಳು ಅರಫಾ ಬೆಟ್ಟದಲ್ಲಿ ಸಂಗಮಿಸಲಿದ್ದು, ವಿಶ್ವದಲ್ಲೇ ಅತಿ ದೊಡ್ಡ ಸಂಗಮವಾಗಿದೆ ಅರಫಾ ಸಂಗಮ. ಹಜ್ ಯಾತ್ರಿಕರು ಶುಕ್ರವಾರ, ಜೂನ್ 14 ರಂದು ಮಿನಾಗೆ ತೆರಳುವರು. ಜೂನ್ 16 ಆದಿತ್ಯವಾರ ಈದುಲ್ ಅದ್’ಹಾ ಅಥವಾ ಬಕ್ರೀದ್ ಆಚರಿಸಲಾಗುತ್ತದೆ.
ಯುಎಇ, ಬಹ್ರೇನ್, ಖತ್ತರ್, ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಜೂನ್ 16 ರಂದು ಈದುಲ್ ಅದ್’ಹಾ ಆಚರಿಸಲಾಗುತ್ತದೆ. ಆದರೆ, ಒಮಾನ್‌ನಲ್ಲಿ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಜೂನ್ 17 ರಂದು ಈದುಲ್ ಅದ್ಹಾ ಆಚರಿಸಲಾಗುತ್ತದೆ. ಧುಲ್ ಹಜ್ ಚಂದ್ರ ದರ್ಶನ ಆಗದ ಕಾರಣ ಒಮಾನ್‌ನಲ್ಲಿ ಜೂನ್ 17 ರಂದು ಸೋಮವಾರ ಈದ್ ಅಲ್-ಅಧ್ಹಾ ಎಂದು ಧಾರ್ಮಿಕ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಇಂದು ಒಮಾನ್‌ನಲ್ಲಿ ದುಲ್ ಖಅದ್ 29 ಆಗಿತ್ತು.