janadhvani

Kannada Online News Paper

ಸೌದಿ ದೊರೆಯ ಅತಿಥಿಗಳಾಗಿ ಹಜ್ ಯಾತ್ರೆ- 88 ದೇಶಗಳ 2,300ಕ್ಕೂ ಹೆಚ್ಚು ಮಂದಿಗೆ ಒಲಿದ ಭಾಗ್ಯ

ಅವರಲ್ಲಿ ಒಂದು ಸಾವಿರ ಮಂದಿ ಪ್ಯಾಲೆಸ್ತೀನ್‌ನಲ್ಲಿ ಹುತಾತ್ಮರಾದವರ, ಗಾಯಗೊಂಡವರ, ಜೈಲಿನಲ್ಲಿರುವವರ ಕುಟುಂಬ ಸದಸ್ಯರಾಗಿದ್ದಾರೆ.

ಮಕ್ಕಾ: ಸೌದಿ ದೊರೆಯ ಅತಿಥಿಗಳಾಗಿ ವಿವಿಧ ದೇಶಗಳ 2,300ಕ್ಕೂ ಹೆಚ್ಚು ಮಂದಿ ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಇದರಲ್ಲಿ ಪ್ಯಾಲೆಸ್ತೀನ್‌ನಲ್ಲಿ ಹುತಾತ್ಮರಾದ ಸುಮಾರು ಒಂದು ಸಾವಿರ ಕುಟುಂಬ ಸದಸ್ಯರು ಸೇರಿದ್ದಾರೆ. 26 ವರ್ಷಗಳ ಹಿಂದೆ ಆರಂಭವಾದ ಕಾರ್ಯಕ್ರಮದ ಮೂಲಕ ಸುಮಾರು 60,000 ಮಂದಿ ಹಜ್ ಗೆ ಅತಿಥಿಗಳಾಗಿ ಆಗಮಿಸಿದ್ದಾರೆ.

ಸೌದಿ ದೊರೆಯ ಅತಿಥಿಗಳಾಗಿ 88 ದೇಶಗಳ 2,322 ಜನರಿಗೆ ಈ ವರ್ಷ ಹಜ್ ಮಾಡಲು ಅವಕಾಶವಿದೆ. ಅವರಲ್ಲಿ ಒಂದು ಸಾವಿರ ಮಂದಿ ಪ್ಯಾಲೆಸ್ತೀನ್‌ನಲ್ಲಿ ಹುತಾತ್ಮರಾದವರ, ಗಾಯಗೊಂಡವರ, ಜೈಲಿನಲ್ಲಿರುವವರ ಕುಟುಂಬ ಸದಸ್ಯರಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಲಾದ 22 ಸಂಯೋಜಿತ ಅವಳಿಗಳ ಕುಟುಂಬದ ಸದಸ್ಯರಿಗೂ ದೊರೆಯ ಅತಿಥಿಗಳಾಗಿ ಹಜ್‌ಗೆ ಆಗಮಿಸಲು ಈ ಬಾರಿ ಅವಕಾಶ ಲಭಿಸಿದೆ.

ದೊರೆ ಸಲ್ಮಾನ್ ಅವರ ಘೋಷಣೆಯ ಮೇರೆಗೆ, ಅತಿಥಿಗಳನ್ನು ಆಯಾ ದೇಶಗಳಿಂದ ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಚಿವ-ಕರೆ-ಮಾರ್ಗದರ್ಶನ ಮತ್ತು ಕಾರ್ಯಕ್ರಮದ ಮೇಲ್ವಿಚಾರಕ ಶೈಖ್ ಅಬ್ದುಲ್ಲತೀಫ್ ಆಲ್-ಶೈಖ್ ಹೇಳಿದರು.

ದೊರೆಯ ಅತಿಥಿಗಳನ್ನು ದೇಶದಲ್ಲಿ ಬರಮಾಡಿಕೊಳ್ಳಲು ಮತ್ತು ಹಜ್ ಉಮ್ರಾ ವಿಧಿವಿಧಾನಗಳನ್ನು ಸುಸೂತ್ರವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಪ್ರವಾದಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು. ದೊರೆ ಸಲ್ಮಾನ್ ಅವರ ವೆಚ್ಚದಲ್ಲಿ ಹಜ್ ಯಾತ್ರೆಗೆ ವಿವಿಧ ದೇಶಗಳ ಅತಿಥಿಗಳನ್ನು ಒಟ್ಟುಗೂಡಿಸುವುದು ಇಸ್ಲಾಂ ಮತ್ತು ಮುಸ್ಲಿಮರ ಐಕ್ಯತೆ ಮತ್ತು ಸಹೋದರತ್ವವನ್ನು ಬಲಪಡಿಸುತ್ತದೆ ಎಂದು ಸಚಿವರು ಹೇಳಿದರು.

error: Content is protected !! Not allowed copy content from janadhvani.com