ದಯಾಮಯನು ಕರುಣಾನಿಧಿಯೂ ಆದ ಅಲ್ಲಾಹನ ಅಪಾರ ಅನುಗ್ರಹದಿಂದ ದಿನಾಂಕ 04.05.24 ರ ಶನಿವಾರದಂದು ಮಗ್ರಿಬ್ ನಮಾಝಿನ ಬಳಿಕ ಹಾಜಿ ಯೂಸೂಫ್ ಕಳಂಜಿಬೈಲ್ ಇವರ ನಿವಾಸದಲ್ಲಿ ಡಿ. ಕೆ. ಎಸ್. ಸಿ.ಇದರ ಜಿಲ್ಲಾ ಘಟಕದ ಅಧ್ಯಕ್ಷರಾದ ಸಯ್ಯದ್ ಮುಖ್ತಾರ್ ತಂಙಲ್ ಕುಂಬೋಲ್ ಇವರು ಡಿ. ಕೆ. ಎಸ್. ಸಿ. ರಿಯಾದ್ ಯೂತ್ ವಿಂಗ್ ಗೆ ದುವಾ ಹಾಗೂ ಆಶೀರ್ವಚನದ ಮೂಲಕ ಚಾಲನೆ ನೀಡಿದರು. ಡಿ.ಕೆ.ಎಸ್.ಸಿ. ರಿಯಾದ್ ವಲಯ ಇದರ ಗೌರವಾಧ್ಯಕ್ಷರಾದ ಜನಾಬ್ ಅಬ್ದುಲ್ ಅಜೀಜ್ ಬಜ್ಪೆ, ಹಿರಿಯ ನೇತಾರ ಹಾಜಿ ಯೂಸುಫ್ ಕಳಂಜಿಬೈಲ್, ರಿಯಾದ್ ವಲಯ ಕಾರ್ಯದರ್ಶಿ ಜನಾಬ್ ಹುಜೈಫ ಪೆರಾಜೆ, ವಲಯ ಖಜಾಂಚಿ ಜನಾಬ್ ದಾವುದ್ ಕಂದಕ್ ಹಾಗೂ ರಿಯಾದ್ ವಲಯದ ಇತರ ನೇತಾರರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಯ್ಯದ್ ಮುಕ್ತಾರ್ ತಂಗಳ್ ಇವರ ಸಲಹೆ ಹಾಗೂ ಅನುಮತಿ ಮೇರೆಗೆ ನೂತನ ಕಾರ್ಯಕಾರಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಜನಾಬ್ ಅಬ್ದುಲ್ ರವೂಫ್ ಸುಳ್ಯ, ಉಪಾದ್ಯಕ್ಷರಾಗಿ ಜನಾಬ್ ಶಾಹಿನ್ ಹಮೀದ್ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜನಾಬ್ ಜುರೈಜ್ ಮುಹಮ್ಮದ್ ಮೂಡುತೋಟ, ಜೊತೆ ಕಾರ್ಯದರ್ಶಿಯಾಗಿ ಜನಾಬ್ ಮುಹಮ್ಮದ್ ಸ ಈದ್ ಉಪ್ಪಿನಂಗಡಿ, ಕೋಶಾಧಿಕಾರಿಯಾಗಿ ಜನಾಬ್ ಹಾರಿಸ್ ಸಖಾಫಿ ಬೇಂಗಿಲ, ಸಲಹೆಗಾರರಾಗಿ ಅಬ್ದುಲ್ ಅಝೀಝ್ ಬಜ್ಪೆ, ಹಾಜಿ ಯೂಸೂಫ್ ಕಳಂಜಿಬೈಲ್, ಅಬ್ದುಲ್ ರಹ್ಮಾನ್ ಸುಲೈಮಾನ್ ಉಚ್ಚಿಲ
ಎಂಬವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಅಲಿಫ್ ಸ್ಕೂಲ್ ಪ್ರಾಂಶುಪಾಲರಾದ ಬಹು:ಮುಸ್ತಫ ಇವರು ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು ಹಾಗೂ ಡಿ.ಕೆ.ಸ್.ಸಿ ರಿಯಾದ್ ವಲಯದ ದಾಯಿ ಉಸ್ತಾದ್ ಕಲೀಲ್ ಝುಹ್ರಿ ಇವರು ಡಿ.ಕೆ.ಎಸ್.ಸಿ. ಹಾದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕೊನೆಯದಾಗಿ ಸಯ್ಯದ್ ಮುಖ್ತಾರ್ ತಂಙಲ್ ಇವರು ಹಿತವಚನ ನೀಡುತ್ತಾ ಡಿ.ಕೆ. ಎಸ್.ಸಿ.ಯ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಹೊಸ ಯುವಕರನ್ನು ಸಂಪರ್ಕಿಸಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಪ್ರತೀ ತಿಂಗಳು ತಪ್ಪದೆ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಮಾಸಿಕ ಸಭೆ ನಡೆಸಿ ರಿಯಾದ್ ಯೂತ್ ವಿಂಗ್ ಇದನ್ನು ಎಲ್ಲರಿಗೂ ಮಾದರಿಯಾಗಿಸಬೇಕೆಂದು ಹೇಳುತ್ತ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕೊನೆಯಲ್ಲಿ ನಬಿ ಕರೀಂ ಸಲ್ಲ ಲ್ಲಾಹು ಅಲೈವಸಲ್ಲಮರ ಮೇಲಿನ ಸ್ವಲಾತಿನೊಂದಿಗೆ ಸಭೆ ಯನ್ನು ಮುಕ್ತಾಯ ಗೊಳಿಸಲಾಯಿತು.