janadhvani

Kannada Online News Paper

ಹಜ್ ಯಾತ್ರಾರ್ಥಿಗಳ ದಟ್ಟಣೆ- ಮದೀನಾದ ‘ರೌಳಾ ಷರೀಫ್‌’ ನಲ್ಲಿನ ಪ್ರಾರ್ಥನಾ ಸಮಯ ಕಡಿತ

ನುಸುಕ್ ಅಪ್ಲಿಕೇಶನ್ ಮೂಲಕ ಪರವಾನಗಿ ಪಡೆಯುವವರಿಗೆ ಮಾತ್ರ ರವ್ಳಾದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ.

ಮದೀನಾ: ಮದೀನಾದ ರೌಳಾ ಷರೀಫ್‌ನಲ್ಲಿ ಪ್ರಾರ್ಥನೆ ಸಮಯವನ್ನು ಕಡಿಮೆಗೊಳಿಸಲಾಗಿದೆ. ಈ ಹಿಂದೆ ಒಬ್ಬ ವ್ಯಕ್ತಿಗೆ ಹದಿನೈದು ನಿಮಿಷಗಳನ್ನು ನೀಡಲಾಗುತ್ತಿದ್ದು, ಇದೀಗ ಹತ್ತು ನಿಮಿಷಕ್ಕೆ ಇಳಿಸಲಾಗಿದೆ. ಹಜ್ ಯಾತ್ರೆಗೆ ಬರುವ ಯಾತ್ರಾರ್ಥಿಗಳ ದಟ್ಟಣೆಯನ್ನು ಆಧರಿಸಿ ನಿಯಂತ್ರಣ ಏರ್ಪಡಿಸಲಾಗಿದೆ.

ಎರಡೂ ಹರಮ್ ವ್ಯವಹಾರಗಳ ಸಚಿವಾಲಯದ ಸಾಮಾನ್ಯ ಪ್ರಾಧಿಕಾರವು ಹೊಸ ನಿರ್ದೇಶನವನ್ನು ಜಾರಿಗೊಳಿಸಿದೆ. ನುಸುಕ್ ಅಪ್ಲಿಕೇಶನ್ ಮೂಲಕ ಪರವಾನಗಿ ಪಡೆಯುವವರಿಗೆ ಮಾತ್ರ ರವ್ಳಾದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ. ಇದು ಮುಂದುವರಿಯುತ್ತದೆ. ಪರವಾನಗಿಯಲ್ಲಿನ ದಿನಾಂಕ ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರವಾನಗಿಯ ಕನಿಷ್ಠ ಅರ್ಧ ಘಂಟೆಯ ಮೊದಲು ವರದಿ ಮಾಡಬೇಕು ಎಂದು ಹರಮ್ ಕಾರ್ಯಾಲಯ ಪ್ರಾಧಿಕಾರವು ಹೇಳಿದೆ.

error: Content is protected !! Not allowed copy content from janadhvani.com