janadhvani

Kannada Online News Paper

ಪ್ರಯಾಣಿಕ ಬಂದರೂ ಪಾಸ್ ಪೋರ್ಟ್ ಬರಲಿಲ್ಲ: ರಾಯಭಾರ ಕಚೇರಿಯ ಮಧ್ಯಸ್ಥಿಕೆ- ಊರು ತಲುಪಿದ ರಹ್ಮತುನ್ನಿಸಾ

ಬೋರ್ಡಿಂಗ್ ಪಾಸ್, ಔಷಧ ಮತ್ತು ಪಾಸ್‌ಪೋರ್ಟ್ ಇರುವ ಬ್ಯಾಗನ್ನು ಅಧಿಕಾರಿಗಳು ಲಗೇಜಿಗೆ ಹಾಕಿದ್ದರು, ಆದರೆ ಇವರು ರಿಯಾದ್ ತಲುಪಿದರೂ, ಲಗೇಜ್ ರಿಯಾದ್ ತಲುಪಲಿಲ್ಲ.

ರಿಯಾದ್: ಜಿದ್ದಾದಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಕೊಯಮತ್ತೂರು ಮೂಲದ ರಹ್ಮತುನ್ನಿಸಾ ಪಾಸ್‌ಪೋರ್ಟ್ ಕಳೆದುಕೊಂಡು ರಿಯಾದ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೀಡಾಗಿದ್ದರು. ಜಿದ್ದಾದಿಂದ ರಿಯಾದ್ ಮೂಲಕ ಕೊಚ್ಚಿಗೆ ವಿಮಾನ ಹತ್ತಲು ಮುಂದಾದಾಗ, ಜಿದ್ದಾ ಏರ್ ಬ್ರಿಡ್ಜ್‌ನಲ್ಲಿ ಅಧಿಕಾರಿಗಳು ಕೈಯಲ್ಲಿದ್ದ ಬ್ಯಾಗನ್ನು ತೆಗೆದುಕೊಂಡು ಲಗೇಜ್‌ಗೆ ಹಾಕಿರುವ ಕಾರಣ ಅವರ ಯಾತ್ರೆಯನ್ನೇ ಮೊಟಕುಗೊಳಿಸಿದೆ.

ಬೋರ್ಡಿಂಗ್ ಪಾಸ್, ಔಷಧ ಮತ್ತು ಪಾಸ್‌ಪೋರ್ಟ್ ಇರುವ ಬ್ಯಾಗನ್ನು ಅಧಿಕಾರಿಗಳು ಲಗೇಜಿಗೆ ಹಾಕಿದ್ದರು, ಆದರೆ ಇವರು ರಿಯಾದ್ ತಲುಪಿದರೂ, ಲಗೇಜ್ ರಿಯಾದ್ ತಲುಪಲಿಲ್ಲ. ಸಾಧ್ಯವಿರುವ ಎಲ್ಲಾ ಹುಡುಕಾಟಗಳನ್ನು ಮಾಡಲಾಯಿತು ಆದರೆ ಪಾಸ್‌ಪೋರ್ಟ್ ಇರುವ ಬ್ಯಾಗ್ ಕಂಡುಬಂದಿಲ್ಲ. ದಾಖಲೆಗಳಿಲ್ಲದೆ ಪ್ರಯಾಣಿಸಲು ಸಾಧ್ಯವಿಲ್ಲದ ಕಾರಣ ಬೋರ್ಡಿಂಗ್ ಪಾಸ್ ಹೊಂದಿದ್ದ ವಿಮಾನ ಉಳಿದ ಪ್ರಯಾಣಿಕರೊಂದಿಗೆ ಹಾರಾಟ ನಡೆಸಿದೆ. ನಂತರ ರಹ್ಮತುನ್ನಿಸಾ ಸ್ಥಳೀಯ ಟ್ರಾವೆಲ್ ಏಜೆನ್ಸಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಏಜೆನ್ಸಿಯ ಮಾಲೀಕರು ರಿಯಾದ್ ನಿವಾಸಿಯಾಗಿರುವ ತಮಿಳುನಾಡು ಮೂಲದ ಫಹದ್‌ಗೆ ಕರೆ ಮಾಡಿ ಮಾಹಿತಿ ನೀಡಿದರು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ನೆರವು ನೀಡುವಂತೆ ಫಹಾದ್ ಟ್ವಿಟರ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮತ್ತು ಸೌದಿ ವಿಮಾನಯಾನ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್ ಗಮನಕ್ಕೆ ಬಂದ ಕೂಡಲೇ ರಾಯಭಾರ ಕಚೇರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ.

ರಾಯಭಾರಿ ಕಚೇರಿಯ ಸೂಚನೆ ಮೇರೆಗೆ ಸೌದಿ ಸಾಮಾಜಿಕ ಕಾರ್ಯಕರ್ತ ಶಿಹಾಬ್ ಕೊಟುಕಾಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರಯಾಣಿಕರನ್ನು ಭೇಟಿಯಾದರು. ವಿಮಾನ ನಿಲ್ದಾಣದ ಕಳೆದುಹೋದ ಲಗೇಜ್‌ಗಳನ್ನು ಸಂಗ್ರಹಿಸುವ ಕೌಂಟರ್‌ಗೆ ಹೋಗಿ ಹುಡುಕಿದರೂ ಬ್ಯಾಗ್ ಪತ್ತೆಯಾಗಲಿಲ್ಲ.

ಪಾಸ್‌ಪೋರ್ಟ್ ಲಭಿಸುವ ಸಾಧ್ಯತೆಗಳು ಕ್ಷೀಣಿಸಿದಾಗ, ಶಿಹಾಬ್ ರಾಯಭಾರ ಕಚೇರಿಗೆ ವಿಷಯ ತಿಳಿಸಿದ್ದಾರೆ. ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಶರತ ಕುಮಾರ್ ಔಟ್ ಪಾಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಲ್ಲಿಸುವಂತೆ ಕೋರಿದರು. ಅರ್ಜಿ ಸಲ್ಲಿಸಿದ ಮರುದಿನವೇ ಪ್ರಯಾಣಕ್ಕಾಗಿ ತಾತ್ಕಾಲಿಕ ಪಾಸ್‌ಪೋರ್ಟ್ (ಔಟ್ ಪಾಸ್) ನೀಡಲಾಯಿತು.

ರಿಯಾದ್ ಏರ್‌ಪೋರ್ಟ್ ಬಂದರಿನ ಅಧಿಕಾರಿಗಳು ತನ್ನ ಪಾಸ್‌ಪೋರ್ಟ್ ಹುಡುಕಲು ತನ್ನೊಂದಿಗೆ ಸಾಕಷ್ಟು ಸಮಯ ಕಳೆದರು ಮತ್ತು ಅಧಿಕಾರಿಯೊಬ್ಬರು ನನ್ನ ತಾಯಿಗೆ ಸಮಾನರು ಎಂದು ಹೇಳಿಕೊಂಡು ಆಹಾರ ಮತ್ತು ನೀರಿಗಾಗಿ ನೂರು ಸೌದಿ ರಿಯಾಲ್ ನೀಡಿದರು ಎಂದು ರಹಮತ್ತುನ್ನಿಸಾ ಕೃತಜ್ಞತೆಯಿಂದ ಸ್ಮರಿಸಿದರು.

ರಿಯಾದ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಉತ್ತಮ ಕೆಲಸಕ್ಕಾಗಿ ಮತ್ತು ಗುರುವಾರ ಪ್ರವಾಸ ಸಾಧ್ಯವಾದಾಗ ಭಾರತೀಯ ರಾಯಭಾರಿ ಕಚೇರಿ ಮತ್ತು ಶಿಹಾಬ್ ಕೊಟುಕಾಡ್ ಅವರ ಮಧ್ಯಸ್ಥಿಕೆ ಮತ್ತು ಪರಿಹಾರಕ್ಕಾಗಿ ಕೃತಜ್ಞತೆಯೊಂದಿಗೆ ರಹ್ಮತುನ್ನಿಸಾ ರಿಯಾದ್‌ನಿಂದ ಹಿಂತಿರುಗಿದರು.

ಪಾಸ್ಪೋರ್ಟ್ ಅಥವಾ ಪ್ರಮುಖ ದಾಖಲೆಗಳನ್ನು ಹೊಂದಿರುವ ಬ್ಯಾಗ್ ಅನ್ನು ಲಗೇಜ್ನಲ್ಲಿ ಇರಿಸಬಾರದು. ಅಧಿಕಾರಿಗಳು ಒತ್ತಾಯಿಸಿದರೆ ಎಲ್ಲ ಪ್ರಮುಖ ಪ್ರಯಾಣದ ದಾಖಲೆಗಳನ್ನು ಕೈಯಲ್ಲಿಟ್ಟುಕೊಂಡು ಬ್ಯಾಗ್ ಲಗೇಜ್ ನಲ್ಲಿ ಇಡಬೇಕು ಎಂದು ಶಿಹಾಬ್ ಕೋಟುಕಾಡ್ ಸಲಹೆ ನೀಡಿದ್ದಾರೆ.

ವಿಸಿಟಿಂಗ್ ವೀಸಾದಲ್ಲಿ ಕುಟುಂಬಗಳು ಸೌದಿ ಅರೇಬಿಯಾಕ್ಕೆ ಗುಳೆ ಹೋಗುವ ಸಮಯ ಇದಾಗಿದ್ದು, ಈ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸದಿದ್ದರೆ ಇಂತಹ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಹ್ಮತುನ್ನಿಸಾ ಅವರಿಗೆ ಸಹಾಯ ಮಾಡಲು ಶಿಹಾಬ್ ಅವರೊಂದಿಗೆ ಶೈಜು ನಿಲಂಬೂರ್ ಮತ್ತು ಸಾಬು ಥಾಮಸ್ ಜತೆ ಇದ್ದರು.

error: Content is protected !! Not allowed copy content from janadhvani.com