janadhvani

Kannada Online News Paper

ಕೆಸಿಎಫ್ ಡಿಸೇನಿಯಂ : ದ.ಕ ಜಿಲ್ಲಾ ವೆಸ್ಟ್ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ

ಚೇರ್ಮ್ಯಾನ್ ಆಗಿ ಎಸ್ ಕೆ ಖಾದರ್ ಹಾಜಿ ಮುಡಿಪು, ಜನರಲ್ ಕನ್ವೀನರ್ ಆಗಿ ಮನ್ಸೂರ್ ಹಿಮಮಿ ಮೊಂಟೆಪದವು, ಕೋಶಾಧಿಕಾರಿಯಾಗಿ ಆಲಿಕುಂಞಿ ಹಾಜಿ ಪಾರೆ

ಮಂಗಳೂರು: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಸಮಿತಿಯ ದಶವಾರ್ಷಿಕ ಮಹಾ ಸಮ್ಮೇಳನ 2024 ಮೇ 19 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.

ಇದರ ಪ್ರಚಾರಾರ್ಥ ಹಲವು ಜಿಲ್ಲೆಗಳಲ್ಲಿ ಕಲ್ಚರಲ್ ಕನ್ವೆನ್ಷನ್ ಗಳು ನಡೆಯಲಿದ್ದು ದ. ಕ ಜಿಲ್ಲಾ ವೆಸ್ಟ್ ವಿಭಾಗದ ಕಲ್ಚರಲ್ ಕನ್ವೆನ್ಷನ್ ಮೇ 7ರಂದು ಪಾಣೆಮಂಗಳೂರು ಸಾಗರ ಆಡಿಟೋರಿಯಂ ನಲ್ಲಿ ನಡೆಯಲಿದ್ದು ಇದಕ್ಕಾಗಿ ಜಿಲ್ಲಾ ನಿರ್ವಹಣಾ ಸಮಿತಿಯನ್ನು ಇತ್ತೀಚೆಗೆ ಅಡ್ಯಾರ್ ಕಣ್ಣೂರು ಸುನ್ನೀ ಸೆಂಟರ್ ನಲ್ಲಿ ನಡೆದ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಜೆ ಎಂ, ಎಸ್ ಎಂ ಎ ಸಂಘಟನೆಗಳ ನಾಯಕರ ಸಭೆಯಲ್ಲಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಡಿಸೇನಿಯಂ ಕರ್ನಾಟಕ ಪ್ರಚಾರ ಸಮಿತಿಯ ಅಧ್ಯಕ್ಷ ಎಂಪಿ ಎಂ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಜಿಲ್ಲಾ ಅಧ್ಯಕ್ಷ ವಿಯು ಇಸ್ಹಾಕ್ ಝುಹ್ರಿ ಉದ್ಘಾಟಿಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು ವಿಷಯ ಮಂಡಿಸಿದರು.
ರಹೀಂ ಸಅದಿ ಕತರ್, ಡಿಸೇನಿಯಂ ವರ್ಕಿಂಗ್ ಕನ್ವೀನರ್ ಸಲೀಂ ಕನ್ಯಾಡಿ ಮಾತನಾಡಿದರು. ವಿವಿಧ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ನಂತರ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.

ಚೇರ್ ಮಾನ್ ಆಗಿ ಎಸ್ ಕೆ ಖಾದರ್ ಹಾಜಿ ಮುಡಿಪು, ಜನರಲ್ ಕನ್ವೀನರ್ ಆಗಿ ಮನ್ಸೂರ್ ಹಿಮಮಿ ಮೊಂಟೆಪದವು, ಕೋಶಾಧಿಕಾರಿಯಾಗಿ ಆಲಿಕುಂಞಿ ಹಾಜಿ ಪಾರೆ, ಕಾರ್ಯಾಧ್ಯಕ್ಷರಾಗಿ ಸಿದ್ದೀಕ್ ಸಖಾಫಿ ಮೂಳೂರು, ವೈಸ್ ಚೇರ್ ಮಾನ್ ಗಳಾಗಿ ಬದ್ರುದ್ದೀನ್ ಅಝ್ಹರಿ ಮರ್ಕಝ್,
ರಹೀಂ ಸಅದಿ ಕತರ್, ಇಸ್ಹಾಕ್ ಝುಹ್ರಿ ಕಾನಕೆರೆ, ಲತೀಫ್ ಮಾಸ್ಟರ್ ಮಂಜನಾಡಿ, ಅಲಿ ಮದನಿ ಸೆರ್ಕಳ,ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಕನ್ವೀನರ್ ಗಳಾಗಿ ರಝಾಕ್ ಸಖಾಫಿ ಕೊಳಕ್ಕೆ, ಫಾರೂಕ್ ಶೇಡಿಗುರಿ, ಸತ್ತಾರ್ ಸಖಾಫಿ ಅಡ್ಯಾರ್ ಪದವು, ಸುಹೈಲ್ ಹತ್ತನೇ ಮೈಲು, ಅಜ್ಮಲ್ ಕಾವೂರು, ಮೂಸ ಹಾಜಿ ಮುಡಿಪು, ಬಶೀರ್ ಗಾಣೆಮಾರ್, ಹಸನ್ ಹಾಜಿ, ಅಬ್ದುಲ್ ರಹಿಮಾನ್ ಪ್ರಿಂಟೆಕ್, ರಝಾಕ್ ಹಾಜಿ ಕೈಕಂಬ, ಇರ್ಷಾದ್ ಗೂಡಿನಬಳಿ ಹಾಗೂ 33 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಪ್ರಚಾರ ಸಮಿತಿಯ ಕನ್ವೀನರ್ ನವಾಜ್ ಸಖಾಫಿ ಅಡ್ಯಾರ್ ಪದವು ಸ್ವಾಗತಿಸಿ ಮನ್ಸೂರ್ ಹಿಮಮಿ ವಂದಿಸಿದರು.

error: Content is protected !! Not allowed copy content from janadhvani.com