ಹಜ್ ಯಾತ್ರಾರ್ಥಿಗಳ ಎಮಿಗ್ರೇಷನ್ ಸ್ವದೇಶದಲ್ಲೇ ಪೂರ್ಣಗೊಳಿಸಲು ಸಿದ್ದತೆ

ಜಿದ್ದಾ: ಹಜ್ ಯಾತ್ರಾರ್ಥಿಗಳು ತಮ್ಮ ದೇಶದಲ್ಲಿಯೇ ಹಜ್ ಯಾತ್ರಾರ್ಥಿಗಳ ಎಮಿಗ್ರೇಷನ್ ಪೂರ್ಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸೌದಿ ತಿಳಿಸಿದೆ.ಭಾರತ ಸಮೇತ ಇತರ ದೇಶಗಳ ಯಾತ್ರಿಕರಿಗೆ ಇದರ ಪ್ರಯೋಜನ ಪಡೆಯಬಹುದಾಗಿದೆ.

ಸೌದಿ ಅರೇಬಿಯಾಗೆ ಹಜ್ ಯಾತ್ರಿಕರು ಆಗಮಿಸುವ ಮುನ್ನ ವಲಸೆ ಕಾರ್ಯವಿಧಾನಗಳನ್ನು ಯಾತ್ರಾರ್ಥಿಗಳು ಹೊರಡುವ ದೇಶಗಳಲ್ಲಿ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

ಮಲೇಶಿಯಾದಲ್ಲಿ ಹಜ್ ಯಾತ್ರೆಯ ಸಮಯದಲ್ಲಿ ಈ ಕ್ರಮ ಜಾರಿಗೊಳಿಸಲಾಗಿದ್ದು, ಅದು ಯಶಸ್ವಿಯಾಗಿತ್ತು.ಸೌದಿ ಪಾಸ್ಪೋರ್ಟ್ ಜವಾಝಾತ್  ಮುಖ್ಯಸ್ಥ ಸುಲೈಮಾನ್ ಅಲ್ ಯಹ್ಯಾ ಈ ಕ್ರಮವನ್ನು ಇಪ್ಪತ್ತೇಳು ದೇಶಗಳಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ಹೆಚ್ಚಿನ ಹಜ್ ಯಾತ್ರಿಕರನ್ನು ಹೊಂದಿರುವ  ಇಂಡೋನೇಷ್ಯಾದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳು ಪ್ರಗತಿಯಲ್ಲಿವೆ.ಭಾರತದಲ್ಲಿಯೂ ಈ ಸೌಕರ್ಯಕ್ಕಾಗಿ ವಿಮಾನ ನಿಲ್ದಾನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಈಗಾಗಲೇ ಘೋಷಿಸಿದ್ದಾರೆ.

ವಲಸೆ ಪ್ರಕ್ರಿಯೆಗಳಲ್ಲದೆ, ಫಿಂಗರ್ ಪ್ರಿಂಟ್ ಗಳು ಪರೀಕ್ಷಿಸುತ್ತಿರುವುದು ಮತ್ತು ಪ್ರತಿರಕ್ಷಣಾ ಚುಚ್ಚುಮದ್ದು ನೀಡಲಾಗಿದೆಯೆ ಎಂಬ ಪರಿಶೋಧನೆ ಕೂಡ ತಮ್ಮ ದೇಶಗಳಲ್ಲೇ ಪೂರ್ಣಗೊಳ್ಳುತ್ತದೆ.ಸೌದಿ ಅರೇಬಿಯಾಕ್ಕೆ ಈ ಯಾತ್ರಿಕರು ತಲುಪಿದಾಗ ನೇರವಾಗಿ ಸ್ವದೇಶಿ ಯಾತ್ರಿಕರಂತೆ ವಿಮಾನ ನಿಲ್ದಾಣದಿಂದ ನಿರ್ಗಮಿಸಬಹುದಾಗಿದೆ.

ಎಮಿಗ್ರೇಷನ್ ಪ್ರಕ್ರಿಯೆಗಳಿಗಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಇದು ಅನುವು ಮಾಡಬಹುದು.

ಈ ಬಾರಿ ಉಮ್ರಾ ಸೀಸನ್ ಪ್ರಾರಂಭಿಸಿದ ನಂತರ ಸೌದಿ ಅರೇಬಿಯಾಕ್ಕೆ ಆಗಮಿಸಿದ ವಿದೇಶಿ ಯಾತ್ರಿಗಳ ಸಂಖ್ಯೆಯು ಸುಮಾರು 63 ಲಕ್ಷ ತಲುಪಿದೆ ಎಂದು ಸುಲೈಮಾನ್ ಅಲ್ ಯಹ್ಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!