janadhvani

Kannada Online News Paper

ದ.ಕ.ಜಿಲ್ಲೆಯ ಜನರ ರಕ್ತ ಕೇಸರಿಯಲ್ಲ,ಮಾಳವಿಕಾರ ಕಣ್ಣು ಹಳದಿ- ಕೆ. ಅಶ್ರಫ್.

ಮಾಳವಿಕಾ ರಂತಹ ಹಳದಿ ಕಣ್ಣಿನ ನಾರಿಗಳು ಭಾರತದಲ್ಲಿರುವುದರಿಂದಲೇ ದ.ಕ.ಜಿಲ್ಲೆಯ ಜನರ ರಕ್ತವನ್ನು ಕಪ್ಪು ಬಣ್ಣಕ್ಕೆ ಹೆಪ್ಪು ಗಟ್ಟಿಸುವ ಈ ಹಿಂದಿನ ಹಲವು ಪ್ರಯತ್ನಗಳಿಂದಲೇ ಅಮಾಯಕ ಮುಗ್ಧ ಜನರು ಜಾತಿ ಧರ್ಮದ ಹೆಸರಲ್ಲಿ ಪ್ರಾಣ ಹಾನಿ ಗೊಳಗಾಗಲು ಕಾರಣ

ಮಂಗಳೂರು: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಪಕ್ಷದ ನಾರಿ ಶಕ್ತಿ ಸಮಾವೇಶದಲ್ಲಿ ಮಾಳವಿಕಾ ಅವಿನಾಶ್ ರವರು ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಎಂದು ಹೇಳಿದ್ದಾರೆ.

ಮಾಳವಿಕಾರವರು ಅರಿತಿಲ್ಲ ದ.ಕ.ಜಿಲ್ಲೆಯ ಜನರನ್ನು ಮತೀಯ ಸಂಕೇತ,ಚಿಹ್ನೆ, ಪದಬಳಕೆಗಳನ್ನು ಹರಿಬಿಟ್ಟು ಇಲ್ಲಿನ ಜನತೆಯನ್ನು ಆ ಕಾರಣಕ್ಕಾಗಿ ವಿಭಜಿಸಿ ಘರ್ಷಣೆಗೆ ಎಳೆದು ಹಾಕಿ, ಫಸಲು ಕೊಯ್ಯುವ ಕಾರ್ಯ ಎಂದು. ಮಾಳವಿಕಾ ಅವರು ತಿಳಿಯಲಿ, ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಅಲ್ಲ,ಅದು ಕೆಂಪು ಆಗಿಯೇ ಉಳಿದಿದೆ . ಆದರೆ ಜಿಲ್ಲೆಯ ಅಸ್ಮಿತೆಯ ಬಗ್ಗೆ ಲವ ಲೇಶವೂ ತಿಳಿಯದ ಮಾಳವಿಕಾ ರವರ ಕಣ್ಣು ಹಳದಿ ಆಗಿದೆ, ಆದುದರಿಂದಲೇ ಮಾಳವಿಕಾ ರವರು ಕೇಸರಿ ಅಲ್ಲದ ತನ್ನ ರಕ್ತ ಕೆಂಪು ಎಂದು ಗೊತ್ತಿದ್ದರೂ ದ.ಕ.ಜಿಲ್ಲೆಯ ಜನರ ರಕ್ತದ ಬಣ್ಣವನ್ನು ಬದಲಿಸಲು ಹೊರಟಿದ್ದಾರೆ ಎಂದು ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳವಿಕಾ ರಂತಹ ಹಳದಿ ಕಣ್ಣಿನ ನಾರಿಗಳು ಭಾರತದಲ್ಲಿರುವುದರಿಂದಲೇ ದ.ಕ.ಜಿಲ್ಲೆಯ ಜನರ ರಕ್ತವನ್ನು ಕಪ್ಪು ಬಣ್ಣಕ್ಕೆ ಹೆಪ್ಪು ಗಟ್ಟಿಸುವ ಈ ಹಿಂದಿನ ಹಲವು ಪ್ರಯತ್ನಗಳಿಂದಲೇ ಅಮಾಯಕ ಮುಗ್ಧ ಜನರು ಜಾತಿ ಧರ್ಮದ ಹೆಸರಲ್ಲಿ ಪ್ರಾಣ ಹಾನಿ ಗೊಳಗಾಗಲು ಕಾರಣ. ಮಾಳವಿಕಾ ಇನ್ನಾದರೂ ತನ್ನ ಹಳದಿ ಕಣ್ಣಿನಿಂದ ದ.ಕ.ಜಿಲ್ಲೆ ಮಾತ್ರವಲ್ಲ ಇಡೀ ದೇಶದ ಜನರ ರಕ್ತ ಕೆಂಪು ಎಂದು ಅರಿತು ಅದನ್ನು ಹೆಪ್ಪುಗಟ್ಟುವ ಕಪ್ಪು ಬಣ್ಣಕ್ಕೆ ತಿರುಗಿಸದಿರುವ ಕಾರ್ಯಕ್ಕೆ ಮುಂದಾಗಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

error: Content is protected !! Not allowed copy content from janadhvani.com