janadhvani

Kannada Online News Paper

ಜಂಇಯ್ಯತ್ತುಲ್ ಉಲಾಮಾ ಹಾಗೂ ಮುಸ್ಲಿಂ ಜಮಾಅತ್- ಗ್ರ್ಯಾಂಡ್ ಇಫ್ತಾರ್ ಮೀಟ್‌ ಯಶಸ್ವಿ

ಬೆಂಗಳೂರು: ಕರ್ನಾಟಕ ಜಂಇಯ್ಯತ್ತುಲ್ ಉಲಾಮಾ ಹಾಗೂ ಮುಸ್ಲಿಂ ಜಮಾಅತ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಹಝ್ರತ್ ಖುದ್ದೂಸ್ ಸಾಹೆಬ್ ಈದ್ಗಾ ಮೈದಾನ ಶಿವಾಜಿ ನಗರದಲ್ಲಿ ನಡೆದ ಇಫ್ತಾರ್ ಮೀಟ್ ನಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಎನ್.ಕೆ.ಎಂ ಶಾಫಿ ಸ‌ಅದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಇಫ್ತಾರ್ ಮೀಟ್‌ನ್ನು ಸಿ.ಎಂ.ಫಾಯಿಝ್ ಉದ್ಘಾಟಿಸಿದರು. ಶಾಸಕರಾದ ರಿಜ್ವಾನ್ ಅರ್ಷದ್ ,ಉಸ್ಮಾನ್ ಶರೀಫ್,ಜಿ.ಎ.ಬಾವ, ಇಬ್ರಾಹಿಂ ವಿಲ್ಲೇಜ್,ಶೌಕತ್ತಲಿ ತಂಗಲ್,ಸಯ್ಯಿದ್ ಇಬ್ರಾಹಿಂ ಬಾಫಕಿ ತಂಙಳ್ ಮೊದಲಾದ ಗಣ್ಯರು ಭಾಗವಹಿಸಿದ್ದರು.