janadhvani

Kannada Online News Paper

ಕೆ.ಸಿ.ಎಫ್ ರಬುವ ಸೆಕ್ಟರ್: ಗ್ರ್ಯಾಂಡ್ ಇಫ್ತಾರ್ ಕೂಟ ಯಶಸ್ವಿ

ರಿಯಾದ್ ಝೋನ್ ಅಧೀನದಲ್ಲಿರುವ ಕೆಸಿಎಫ್ ರಬುವ ಸೆಕ್ಟರ್ ವತಿಯಿಂದ ಕಳೆದ ಶುಕ್ರವಾರ ಗ್ರ್ಯಾಂಡ್ ಇಫ್ತಾರ್ ಕೂಟವು ಯಶಸ್ವಿಯಾಗಿ ನಡೆಯಿತು. ಸಂಜೆ 5ಕ್ಕೆ KCF ರಬುವ ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಅವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಜಲಾಲುದ್ದೀನ್ ಅಲ್ -ಹಾದಿ ತಂಙಳ್ ಉಜಿರೆ ಅವರ ನೇತೃತ್ವದಲ್ಲಿ ಆತ್ಮೀಯ ಮಜ್ಲಿಸ್ ನಡೆಯಿತು.ಬಳಿಕ ನಡೆದ ಬೃಹತ್ ಇಫ್ತಾರ್ ಕೂಟದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಮಗ್ರಿಬ್ ನಮಾಝ್ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಯ್ಯಿದ್ ಉಜಿರೆ ತಂಙಳ್ ರವರು KCF ಕುರಿತ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಇದೇ ಸಮಯ ಗ್ರಾಂಡ್ ಇಫ್ತಾರ್ ಕಾರ್ಯಕ್ರಮಕ್ಕೆ ಅಹರ್ನಿಶಿ ದುಡಿದ ಇರ್ಫಾನ್ ಕನ್ಯಾರಕೋಡಿ ಮತ್ತು ಮುಖ್ತಾರ್ ಹಳೆಯಂಗಡಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಹಲವು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.

ಇಫ್ತಾರ್ ಕೂಟ ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಡಿಗೆರೆ, ವೈಸ್ ಚೆಯರ್ಮ್ಯಾನ್ ಅಬ್ದುಲ್ ಸಮದ್ ಗಂಡಿಬಾಗಿಲು, ಕನ್ವೀನರ್ PKM ಆಸಿಫ್ ಉರುವಾಲು ಪದವು,ವೈಸ್ ಕನ್ವೀನರ್ ಅಶ್ರಫ್ ತೌಡುಗೋಳಿ ಕೋಶಾಧಿಕಾರಿ ಅಬ್ದುಲ್ ಮಜೀದ್ ಹಳೆಯಂಗಡಿ ಸಲಹೆ ಗಾರರಾಗಿ ಇಸ್ಮಾಯಿಲ್ ಮದನಿ ಹಾಗೂ ಯಾಕೂಬ್ ಮದನಿ ಹಾಗೂ ಎಲ್ಲಾ ಸೆಕ್ಟರ ಹಾಗೂ ಯುನಿಟ್ ನಾಯಕರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕೊನೆಯಲ್ಲಿ ರಶೀದ್ ಮದನಿ ಉರುವಾಲು ಪದವು ಇವರ ನೇತೃತ್ವದಲ್ಲಿ ಬುರ್ಧಾ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

error: Content is protected !! Not allowed copy content from janadhvani.com