janadhvani

Kannada Online News Paper

ಬುರೈದಾದಲ್ಲಿ ಮರಣ ಹೊಂದಿದ ಉಸ್ಮಾನ್ ತಿಂಗಳಾಡಿ: ಅಂತ್ಯಕ್ರಿಯೆ ನೆರವೇರಿಸಿದ ಕೆಸಿಎಫ್

ಉದ್ಯೋಗ ನಿಮಿತ್ತ ಕಳೆದ ಕೆಲವು ವರ್ಷಗಳಿಂದ ಬುರೈದದಲ್ಲಿದ್ದ ಪುತ್ತೂರು ನಿವಾಸಿ ಉಸ್ಮಾನ್ ತಿಂಗಳಾಡಿಯವರು ರಮಳಾನ್ 9 ರಂದು ಮರಣ ಹೊಂದಿದ್ದರು.

ಹೃದಯಾಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಮೃತರು ಪತ್ನಿ 4 ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ

ಮರಳು ನಾಡಿನಲ್ಲಿ ಮರಣ ಹೊಂದಿದವರ ದಾಖಲೆ ಪತ್ರಗಳು ಹಾಗೂ ಅಂತ್ಯಕ್ರಿಯೆಗಳಿಗೆ ಬೇಕಾಗಿ ತಕ್ಷಣ ಸ್ಪಂದಿಸುವ ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಕಾರ್ಯಕರ್ತರು ಎಲ್ಲಾ ರೀತಿಯ ಸಹಕಾರವನ್ನು ನೀಡಿ ಅಂತ್ಯಕ್ರಿಯೆಯನ್ನು ನಡೆಸಿದರು.

ದಫನ ಮಾಡಲು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಕ್ಲಪ್ತ ಸಮಯದಲ್ಲಿ ಸರಿಪಡಿಸಿ ಅಂತ್ಯಕ್ರಿಯೆಯನ್ನು ನಡೆಸಿದ ಕೆಸಿಎಫ್ ಸಂಘಟನೆಯ ಕಾರ್ಯಾಚರಣೆಯನ್ನು ಕುಟುಂಬಸ್ಥರು ಶ್ಲಾಘಿಸಿದರು.