janadhvani

Kannada Online News Paper

ದ.ಕ.ಜಿಲ್ಲೆಯ ಜನತೆ ಈ ಬಾರಿ ಸಹಿಷ್ಣುತೆ ಪ್ರತಿಪಾದಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ- ಕೆ.ಅಶ್ರಫ್

ಕಳೆದ ಮೂರು ದಶಕಳಿಂದ ಜಿಲ್ಲೆಯ ಜನರ ನೈಜ ವೈಭವತೆಯನ್ನು ದೇಶದ ಮುಂದೆ ಪ್ರತಿಪಾದಿಸುವ ಪ್ರಯತ್ನವನ್ನು ಮಾಡದೆ ಇರುವ ಜನಪ್ರತಿನಿಧಿಗಳನ್ನು ಜನರು ಈ ಬಾರಿ ತೊರೆಯಲಿದ್ದಾರೆ.

ಮಂಗಳೂರು: ದ.ಕ.ಜಿಲ್ಲೆಯ ಜನತೆ ಮೂಲತಃ ಸಹಿಷ್ಣುತಾ ಪ್ರಿಯರು, ಸಮಯ ಸಾಧಕರ ಹಾದಿಗೆ ಬಿದ್ದು ತಮ್ಮತನವನ್ನು ತಾತ್ಕಲಿಕವಾಗಿ ಕಳೆದು ಕೊಂಡವರು. ಈ ಬಾರಿ ಜನತೆ ಜಿಲ್ಲೆಯಿಂದ ಸಹಿಷ್ಣುತೆ ಪ್ರತಿಪಾದಕ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ರವರನ್ನು ದೆಹಲಿಗೆ ಕಳುಹಿಸಲಿದ್ದಾರೆ.

ಕಳೆದ ಮೂರು ದಶಕಳಿಂದ ಜಿಲ್ಲೆಯ ಜನರ ನೈಜ ವೈಭವತೆಯನ್ನು ದೇಶದ ಮುಂದೆ ಪ್ರತಿಪಾದಿಸುವ ಪ್ರಯತ್ನವನ್ನು ಮಾಡದೆ ಇರುವ ಜನಪ್ರತಿನಿಧಿಗಳನ್ನು ಜನರು ಈ ಬಾರಿ ತೊರೆಯಲಿದ್ದಾರೆ. ಅಷ್ಟೂ ವರ್ಷಗಳಲ್ಲಿ ಜಿಲ್ಲೆಯ ಸಾಮರಸ್ಯಕ್ಕೆ ಹುಳಿ ಹಿಂಡಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತಹ ಕುಹಕಿಗಳ ಪ್ರಯತ್ನದಿಂದಾಗಿ ಜಿಲ್ಲೆಯ ಜನತೆ ಇನ್ನಿಲ್ಲದ ಬೆಲೆ ತೆತ್ತಿರುವುದು ಖೇದಕರ.

ಆದರೆ ಈ ಬಾರಿ ಜಿಲ್ಲೆಯ ಜನತೆ ದಾರ್ಶನಿಕತೆ, ಪ್ರತಿಪಾದತ್ವ ಮತ್ತು ಸಹಿಷ್ಣುತೆಯ ಪರವಾಗಿದ್ದಾರೆ. ಸಹಿಷ್ಣುತೆ ಪ್ರತಿಪಾದಕ ಅಭ್ಯರ್ಥಿಯೇ ಮೂರು ದಶಕಗಳ ನಂತರ ಲೋಕಸಭೆ ಪ್ರವೇಶಿಸಲಿದ್ದಾರೆ. ಜಿಲ್ಲೆಯ ಜನತೆ ವಿಜಯಿಯಾಗಲಿದ್ದಾರೆ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com