janadhvani

Kannada Online News Paper

ಮುಸ್ಲಿಮರು ಪರಸ್ಪರ ಸಾಮರಸ್ಯವನ್ನು ಕಾಪಾಡಬೇಕು- ಮುಸ್ಲಿಂ ವರ್ಲ್ಡ್ ಲೀಗ್ ಸಮ್ಮೇಳನದಲ್ಲಿ ಡಾ.ಹಕೀಂ ಅಝ್ಹರಿ

ಪರಸ್ಪರ ಕೋಪ, ದ್ವೇಷ ಮತ್ತು ಅಸಹಿಷ್ಣುತೆಯಾಗಿದೆ ಪ್ಯಾಲೆಸ್ತೀನ್‌ನಂತೆ ಮುಸ್ಲಿಂ ಸಮುದಾಯವು ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಹಿಂದಿನ ಪ್ರಮುಖ ಕಾರಣ ಎಂದು ಅಝ್ಹರಿ ಅಭಿಪ್ರಾಯ ಪಟ್ಟರು.

ಮಕ್ಕಾ | ಮುಸ್ಲಿಂ ಸಮುದಾಯದ ವಿವಿಧ ವರ್ಗಗಳ ನಡುವೆ ನಂಬಿಕೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಸಾಮರಸ್ಯ ಮತ್ತು ಸಹನೆಯನ್ನು ಎತ್ತಿಹಿಡಿಯಬೇಕು ಎಂದು ಎಸ್ ವೈಎಸ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮರ್ಕಝ್ ನಾಲೆಡ್ಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ಹಕೀಂ ಅಝ್ಹರಿ ಪ್ರಸ್ತಾಪಿಸಿದ್ದಾರೆ.

ಎರಡು ಪವಿತ್ರ ಮಸೀದಿಗಳ ಪಾಲಕ, ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆಲ್ ಸಊದ್ ಅವರ ಮೇಲ್ನೋಟದಲ್ಲಿ “ಇಸ್ಲಾಮಿಕ್ ಪಂಗಡಗಳ ನಡುವೆ ಸೇತುವೆಗಳ ನಿರ್ಮಾಣ” ಎಂಬ ಘೋಷವಾಕ್ಯದಲ್ಲಿ ರಾಬಿತ್ವತುಲ್ ಆಲಮಿಲ್ ಇಸ್ಲಾಮಿಯ್ಯಾ (ಮುಸ್ಲಿಂ ವರ್ಲ್ಡ್ ಲೀಗ್) ಮಕ್ಕಾದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಇಸ್ಲಾಮಿಕ್ ಸಮ್ಮೇಳನದಲ್ಲಿ ಅಝ್ಹರಿ ಅವರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪರಸ್ಪರ ಕೋಪ, ದ್ವೇಷ ಮತ್ತು ಅಸಹಿಷ್ಣುತೆಯಾಗಿದೆ ಪ್ಯಾಲೆಸ್ತೀನ್‌ನಂತೆ ಮುಸ್ಲಿಂ ಸಮುದಾಯವು ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಹಿಂದಿನ ಪ್ರಮುಖ ಕಾರಣ ಎಂದು ಅಝ್ಹರಿ ಅಭಿಪ್ರಾಯ ಪಟ್ಟರು.

ಇಫ್ತಾರ್ ಕೂಟದಲ್ಲಿ ಹಕೀಂ ಅಝ್ಹರಿ

ವಿವಿಧ ದೇಶಗಳ ಮುಸ್ಲಿಂ ಸಂಘಟನೆಗಳ ಪರವಾಗಿ ಅಬ್ದುಲ್ಲಾ ಬಿನ್ ಶೈಖ್ ಬಿನ್ ಬಯ್ಯ (ಯುಎಇ), ಆಯತುಲ್ಲಾಹ್ ಅಶೈಖ್ ಅಹ್ಮದ್ ಮಬ್ಲಗೀ (ಇರಾನ್), ಡಾ. ಮುಹಮ್ಮದ್ ಮುಖ್ತಾರ್ ಜುಮುಅ (ಈಜಿಪ್ಟ್), ಶೈಖ್ ಮಿಫ್ತಾಹ್ ಅಲ್ ಅಖ್ಯಾರ್ ಅಬ್ದುಲ್ ಗನೀ(ಇಂಡೋನೇಷಿಯಾ), ಶೈಖ್ ಫಳ್ ಲುರ್ರಹ್ಮಾನ್ ಬಿನ್ ಮುಪ್ತಿ ಮಹಮೂದ್ (ಪಾಕಿಸ್ತಾನ), ಡಾ. ಅಲಿ ಬಿನ್ ಅಬ್ದುರಹ್ಮಾನ್ ಅರ್ಬಾಶ್ (ಟರ್ಕಿ), ಡಾ. ಅಸ್ಸಯ್ಯಿದ್ ಜವಾದ್ ಅಲ್-ಖೌಈ (ಇರಾಕ್), ಶೈಖ್ ವಾನ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ (ಮಲೇಷ್ಯಾ), ಶೈಖ್ ಮುಹಮ್ಮದ್ ಅಲ್-ಮಾಹೀ (ಆಫ್ರಿಕಾ), ಎರಡೂ ಹರಂಗಳ ಮೇಲ್ವಿಚಾರಕ ಡಾ. ಅಬ್ದುಲ್ ರಹಮಾನ್ ಅಲ್ ಸುದೈಸಿ ಮತ್ತಿತರರು ಭಾಗವಹಿಸಿದ್ದರು.

ಕೇರಳದಿಂದ ಏಕೈಕ ಆಹ್ವಾನಿತರಾಗಿ ಸಮಸ್ತವನ್ನು ಪ್ರತಿನಿಧಿಸಿದ ಸಮಸ್ತ ಮುಶಾವರದ ಸದಸ್ಯರೂ ಆದ ಡಾ. ಹಕೀಂ ಅಝರಿ ಸಮಾವೇಶದಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com