janadhvani

Kannada Online News Paper

ಮಕ್ಕಾದಲ್ಲಿ ಕಾಣೆಯಾಗಿದ್ದ ಉಮ್ರಾ ಯಾತ್ರಾರ್ಥಿ ಬಂಟ್ವಾಳದ ಮಹಿಳೆ ಪತ್ತೆ

ಬಂಟ್ವಾಳದ ಐಸಮ್ಮ ಎಂಬವರು ಮಾ.8 ರಿಂದ ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಾಣೆಯಾಗಿದ್ದರು.

ಮಕ್ಕತುಲ್ ಮುಕರ್ರಮಃ: ಮಂಗಳೂರಿನಿಂದ ಉಮ್ರಾಕೆ ತೆರಳಿದ್ದ ಬಂಟ್ವಾಳದ ಐಸಮ್ಮ ಎಂಬವರು ಮಾ.8 ರಿಂದ ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಾಣೆಯಾಗಿದ್ದರು.

ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಕೆಸಿಎಫ್, ಐಸಿಎಫ್ ಕೆಎಂಸಿಸಿ ಸಹಿತವಿರುವ ಕಾರ್ಯಕರ್ತರ ತೀವ್ರ ಪರಿಶ್ರಮದಿಂದ ಎಂಟು ದಿನಗಳ ಬಳಿಕ ಇಂದು ಮಾ.16 ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಾದ ಹರಂನಲ್ಲಿ ಕೆಲಸಮಾಡುತ್ತಿರುವ ಕೆಸಿಎಫ್ ನ ಸಕ್ರಿಯ ಕಾರ್ಯಕರ್ತ ಶರೀಫ್ ಸಜಿಪ ರವರು ಮಸ್ಜಿದುಲ್ ಹರಂ ಪರಿಸರದಲ್ಲೇ ಐಸಮ್ಮ ಅವರನ್ನು ಪತ್ತೆಹಚ್ಚಿದ್ದಾರೆ.

ಅವರು ಮಕ್ಕಾದಲ್ಲಿ ತಮ್ಮ ವಾಸ ಸ್ಥಳದಿಂದ ಯಾವುದೇ ಬ್ಯಾಗ್, ಐಡಿ ಕಾರ್ಡ್ ಅಥವಾ ಉಮ್ರಾ ಗ್ರೂಪ್ ನೀಡಿರುವ ಶಾಲ್ ತೆಗೆದುಕೊಳ್ಳದೆ ಹರಂ ಗೆ ತೆರಳಿದ್ದ ಕಾರಣ, ರಮಳಾನ್ ಪ್ರಯುಕ್ತ ಭಾರೀ ಜನಸಂದಣಿಯ ವಾತಾವರಣದಲ್ಲಿ ಮಸ್ಜಿದುಲ್ ಹರಂನಲ್ಲಿ ಪತ್ತೆ ಹಚ್ಚುವುದು ಬಲು ದೊಡ್ಡ ಸವಾಲಾಗಿತ್ತು.

ಇವರ ಪತ್ತೆಯಿಲ್ಲದೆ, ಇವರನ್ನು ಕರಕೊಂಡು ಹೋಗಿದ್ದ ಉಮ್ರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದರು.