janadhvani

Kannada Online News Paper

ಕತಾರ್‌ನಲ್ಲಿ ಏಳು ವರ್ಷದ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಮೃತ್ಯು

ಜನ್ನಾ ಜಮೀಲಾ ಪೊಡಾರ್ ಪರ್ಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ.

ದೋಹಾ: ಕತಾರ್‌ನಲ್ಲಿ ಮಲಯಾಳಿ ಬಾಲಕಿ ಮೃತಪಟ್ಟಿದ್ದಾಳೆ.ಕೋಝಿಕ್ಕೋಡ್ ನ ಅರಿಕ್ಕಾಡ್ ವಲಿಯಪರಂಬ್ ನ ಮುಹಮ್ಮದ್ ಸಿರಾಜ್-ಶಬ್ನಾಝ್ ದಂಪತಿಯ ಪುತ್ರಿ ಏಳು ವರ್ಷದ ಜನ್ನಾ ಜಮೀಲಾ ಎಂಬ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಜನ್ನಾ ಜಮೀಲಾ ಪೊಡಾರ್ ಪರ್ಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ. ಮನೆಯಲ್ಲಿ ಆಟವಾಡುತ್ತಿದ್ದಾಗ ಮಗು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಸಹೋದರ ಮುಹಮ್ಮದ್ (ಪೊಡಾರ್ ಪರ್ಲ್ ಶಾಲೆಯ ವಿದ್ಯಾರ್ಥಿ).

ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಮೃತದೇಹವನ್ನು ಅಬು ಹಮೂರ್ ಖಬರ್ ಸ್ಥಾನದಲ್ಲಿ ದಫನ ಗೈಯಲಾಗುವುದು ಎಂದು ಕೆಎಂಸಿಸಿ ಕತಾರ್ ಅಲ್ ಇಹ್ಸಾನ್ ಸಮಿತಿ ತಿಳಿಸಿದೆ.

error: Content is protected !! Not allowed copy content from janadhvani.com