janadhvani

Kannada Online News Paper

ಕೇರಳದ ತರಕಾರಿ ಆಮದಿಗೆ ನಿರ್ಬಂಧ- ಅನಿವಾಸಿಗಳಲ್ಲಿ ಆತಂಕ

ದುಬೈ: ಕೇರಳದ ತರಕಾರಿಗಳ ಆಮದನ್ನು ಸ್ಥಗಿತ ಗೊಳಿಸಿದ ಬಳಿಕ ಯಾತ್ರಾ ನಿಷೇಧವನ್ನು ಏರ್ಪಡಿಸಲಾಗುವುದೇ ಎಂದು ಗಲ್ಫ್ ನಲ್ಲಿರುವ ವಲಸಿಗರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕುವೈತ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.ನಿಪಃ ವೈರಸ್ ‌ನ ಕಾರಣದಿಂದಾಗಿ ಕೇರಳದಿಂದ ಹಣ್ಣುಗಳ ಆಮದನ್ನು ಸ್ಥಗಿತಗೊಳಿಸಲು  ಇತ್ತೀಚೆಗೆ ಗಲ್ಫ್ ರಾಷ್ಟ್ರಗಳು ನಿರ್ಧರಿಸಿದ್ದವು.

ಬಾವಲಿ ಕಚ್ಚಿದ ಹಣ್ಣುಗಳಿಂದಾಗಿ ನಿಪಃ ವೈರಸ್ ತಗುಲಿದೆ ಎನ್ನುವ ಕಾರಣಕ್ಕಾಗಿ ಕೇರಳದ ಹಣ್ಣು ತರಕಾರಿಗಳ ಅಮದನ್ನು ತಡೆ ಹಿಡಿಯಲಾಗಿದೆ.

ಗಲ್ಫ್ ದೇಶಗಳಲ್ಲಿರುವ ಕೇರಳೀಯರು, ಕೇರಳಕ್ಕೆ ಪ್ರಯಾಣ ನಿಷೇಧಿಸಲಿದ್ದಾರೆ ಎನ್ನುವ ಬಗ್ಗೆ ಆತಂಕದಲ್ಲಿದ್ದಾರೆ.ಬಹ್ರೈನ್ ಮತ್ತು ಯುಎಇ ಈಗಾಗಲೇ ಕೇರಳಕ್ಕೆ ತಾತ್ಕಾಲಿಕವಾಗಿ ಪ್ರಯಾಣವನ್ನು ಬೆಳೆಸದಂತೆ ನಿರ್ದೇಶಿಸಿವೆ.ಬಹ್ರೈನ್‌ನ ಮುಂಬೈ ಕಾನ್ಸುಲೇಟ್ ಮತ್ತು ಯುಎಇಯ ತಿರುವನಂತಪುರಂ ಕಾನ್ಸುಲೇಟ್ ಈ ನಿರ್ದೇಶನವನ್ನು ನೀಡಿದೆ.

ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಯೋಜಿಸಲಾಗುತ್ತಿದೆ ಎಂದು ಕುವೈತ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದು ಕುವೈತ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಊರಿಗೆ ತೆರಳಿದ ಹಲವರು ಕಾಲಾವಧಿಯ ಮುನ್ನವೇ ಗಲ್ಫ್ ಗೆ ಹಿಂದಿರುಗಿದ್ದಾರೆ.ಕೇರಳಕ್ಕೆ ತೆರಳಲು ಬಯಸಿದವರಲ್ಲಿ ಅನೇಕರು ತಮ್ಮ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

error: Content is protected !! Not allowed copy content from janadhvani.com