janadhvani

Kannada Online News Paper

ದಮ್ಮಾಮ್-ಮಂಗಳೂರು ಏರ್ ಇಂಡಿಯಾ ವಿಮಾನ ವಿಳಂಬ: ರೋಗಿಗಳ ಪರದಾಟ

ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಮೂಲದ ಮಹಿಳೆ ಒಬ್ಬರು ವಿಮಾನಯಾನದ ವಿಳಂಬದಿಂದಾಗಿ ಆರೋಗ್ಯ ತೀವ್ರ ಹದಗೆಡುವಂತಾಯಿತು.

ದಮ್ಮಾಮ್ : ಏರ್ ಇಂಡಿಯಾ ವಿಮಾನವು ತನ್ನ ವಿಳಂಬ ಪಲ್ಲವಿಯನ್ನು ಮುಂದುವರಿಸಿ, ಪ್ರಯಾಣಿಕರನ್ನು ಸತಾಯಿಸುವ ಚಾಳಿಯನ್ನು ರೂಢಿಸಿಕೊಂಡಿದೆ. ನಿನ್ನೆ ದಮ್ಮಾಮ್‌ನಿಂದ ಮಂಗಳೂರಿಗೆ ತೆರಳಬೇಕಾದ Air India Express ವಿಮಾನ ಕ್ಲಪ್ತ ಸಮಯಕ್ಕೆ ಪ್ರಯಾಣಿಸದೆ, ಪ್ರಯಾಣಿಕರನ್ನು ಕುಳ್ಳಿರಿಸಿ ವಿಮಾನದೊಳಗೆ ಉಸಿರುಗಟ್ಟಿಸುವಂತೆ ಮಾಡಿದೆ.

ನಿನ್ನೆ ರಾತ್ರಿ (23/02/2024) 10:20 ಕ್ಕೆ ಟೇಕ್‌ಆಫ್ ಆಗ ಬೇಕಿದ್ದ ವಿಮಾನ ಒಂದು ಗಂಟೆಗಳ ಕಾಲ ವಿಳಂಬಗೊಂಡಿದೆ. ಸುಮಾರು ಒಂದು ಗಂಟೆಗಳ ಕಾಲ ವಿಮಾನದೊಳಗೆ ಕುಳಿತಿದ್ದ ಪ್ರಯಾಣಿಕರು
ಉಸಿರಾಡಲೂ ಕಷ್ಟಪಡುವ ಅವಸ್ಥೆ ಉಂಟಾಗಿದೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ
ಕುಂದಾಪುರ ಮೂಲದ ಮಹಿಳೆ ಒಬ್ಬರು
ವಿಮಾನಯಾನದ ವಿಳಂಬದಿಂದಾಗಿ ಆರೋಗ್ಯ ತೀವ್ರ ಹದಗೆಡುವಂತಾಯಿತು.

ಇದು Air India ಕ್ಕೆ ಹೊಸತೇನಲ್ಲ.
ನಿರಂತರ ಪ್ರಯಾಣಿಕರನ್ನು ಸತಾಯಿಸುವುದು, ಪ್ರಶ್ನಿಸಿದರೆ ಪ್ರಯಾಣಿಕರಿಗೆ ಉಡಾಫೆ ಉತ್ತರ ಕೊಡುವ Air India ಸಿಬ್ಬಂದಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ ಎಂದು ಅನಿವಾಸಿ ಮಿತ್ರರು ಒತ್ತಾಯಿಸಿದ್ದಾರೆ.

ವರದಿ: ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)

error: Content is protected !! Not allowed copy content from janadhvani.com