janadhvani

Kannada Online News Paper

ಕಲಾ ಪ್ರತಿಭೆಗಳನ್ನು ಗುರುತಿಸಿ, ನಮ್ಮವರನ್ನು ಪೋಷಿಸೋಣ…

SSF ಗೋಲ್ಡನ್ ಫಿಫ್ಟಿ ಸಮ್ಮೇಳನದ ಐತಿಹಾಸಿಕ ವಿಜಯದ ಬಳಿಕವಂತೂ ಮುಟ್ಟಿದ್ದೆಲ್ಲಾ ಗೋಲ್ಡ್ ಆಗುತ್ತಿದೆ.ಈ ವಿಜಯಗಳ ಹಿಂದೆ ಒಂದು ದೊಡ್ಡ ಟೀಮ್ ವರ್ಕ್ ಇದೆ. ಅದರಲ್ಲೂ ಗೋಲ್ಡನ್ ಸಖಾಫಿ ಯವರನ್ನು ನಾವು ಯಾವತ್ತೂ ಮರೆಯುವಂತಿಲ್ಲ.

✍️ PKM ಹನೀಫ್ ರಝ್ವಿ, ಉರುವಾಲು ಪದವು.

ಕಳೆದ ನಾಲ್ಕು ತಿಂಗಳಿನಿಂದ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭೆಗಳ ಕಳರವ ಸಾಹಿತ್ಯೋತ್ಸವಕ್ಕೆ ಕಳೆದ ಭಾನುವಾರ ಆಂಧ್ರಪ್ರದೇಶದಲ್ಲಿ ಯಶಸ್ವಿ ಸಮಾಪ್ತಿ ಕಂಡಿದೆ.ಅದರೊಂದಿಗೆ ಮುಂದಿನ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ ನಡೆಯುವ ಸ್ಥಳದ ಘೋಷಣೆಯು ನಡೆದಿದೆ. ನಮ್ಮ ಹತ್ತಿರದ ರಾಜ್ಯವಾದ ಗೋವಾ ಮುಂದಿನ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದ ವೇದಿಕೆ ಕಲ್ಪಿಸಲಿದೆ.
2024 ರ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದ ಮೂಲಕ ಕರ್ನಾಟಕ ದೇಶಾದ್ಯಂತ ಸ್ಪಷ್ಟ ಸಂದೇಶವನ್ನು ನೀಡಿ ಟ್ರೋಫಿಯನ್ನು ಹೊತ್ತು ತಂದಿದೆ.

ಕರ್ನಾಟಕ SSF ಸಾಕಷ್ಟು ಬೆಳೆದು ನಿಂತಿದೆ.ಕೇರಳ ಕೇರಳ ಎಂದು ಬೊಬ್ಬಿರುತ್ತಿರುವವರಿಗೆ ಇದೀಗ ಕರ್ನಾಟಕ ರೋಲ್ ಮೊಡೆಲ್ ಆಗಿದೆ. ಸ್ಪರ್ಧಾರ್ಥಿಗಳಿಂದ ಹೊರಹೊಮ್ಮಿದ ಕಲೆ,ನಾಯಕರ ಅವಿರತ ಪರಿಶ್ರಮದ ಫಲ ಇಂದು ದೇಶವೇ ಕರ್ನಾಟಕವನ್ನು ಕಣ್ಣೆತ್ತಿ ನೋಡುವಂತೆ ಮಾಡಿದೆ. ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ವಿಜಯದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಎಲ್ಲಾ ಪ್ರತಿಬೆಗಳಿಗೆ ಅಭಿನಂದನೆ ಅರ್ಪಿಸುತ್ತಿದ್ದೇನೆ.

ಬೆಂಗಳೂರಿನಲ್ಲಿ ನಡೆದ ಗೋಲ್ಡನ್ ಫಿಫ್ಟಿ ಖಲೀಲ್ ತಂಙಳ್, ಚುಳ್ಳಿಕ್ಕೋಡ್ ಸಖಾಫಿ ಉಸ್ತಾದರ ಸಹಿತ ಹಲವು ನೇತಾರರ ಬಾಯಿಯಿಂದ ಮುಕ್ತವಾಗಿ ಪ್ರ್ಶಂಸೆಗೆ ಪಾತ್ರವಾಗಿದೆ.
SSF ಗೋಲ್ಡನ್ ಫಿಫ್ಟಿ ಸಮ್ಮೇಳನದ ಐತಿಹಾಸಿಕ ವಿಜಯದ ಬಳಿಕವಂತೂ ಮುಟ್ಟಿದ್ದೆಲ್ಲಾ ಗೋಲ್ಡ್ ಆಗುತ್ತಿದೆ.ಈ ವಿಜಯಗಳ ಹಿಂದೆ ಒಂದು ದೊಡ್ಡ ಟೀಮ್ ವರ್ಕ್ ಇದೆ. ಅದರಲ್ಲೂ ಗೋಲ್ಡನ್ ಸಖಾಫಿ ಯವರನ್ನು ನಾವು ಯಾವತ್ತೂ ಮರೆಯುವಂತಿಲ್ಲ.

ಇನ್ನು ವಿಷಯಕ್ಕೆ ಬರೋಣ……..ಹೌದು! ಒಂದು ಕಾಲವಿತ್ತು ಯಾವುದಕ್ಕೂ ಕೇರಳವನ್ನು ಆಶ್ರಯಿಸುವ ಒಂದು ಪದ್ಧತಿ.ಆದ್ರೆ ಕಾಲ ಬದಲಾಗಿದೆ.ಈಗ ಕರ್ನಾಟಕವನ್ನಾಗಿದೆ ಕೇರಳ ಸಹಿತ ದೇಶದ ವಿವಿಧ ರಾಜ್ಯಗಳು ಅನುಕರಿಸುತ್ತಿರುವುದು. ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳು ಬೆಳೆದು ಹೆಮ್ಮರವಾಗಿದ್ದಾರೆ.ಭಾಷಣ,ಹಾಡು, ಬುರ್ಧಾ ,ಲೇಖನ ಹೀಗೆ ರಾಜ್ಯದ ವಿವಿಧೆಡೆ ಅದೆಷ್ಟೋ ಪ್ರತಿಭೆಗಳು ಇದ್ದರೂ ಅವರು ಕೇವಲ ಸಾಹಿತ್ಯೋತ್ಸವಕ್ಕೆ ಮಾತ್ರ ಸೀಮಿತ ವಾಗುತ್ತಿದ್ದಾರೆ. ಅವರನ್ನು ನಾವು ಬೆಳೆಸುತ್ತಿಲ್ಲ ವೇದಿಕೆ ಕಟ್ಟಿಕೊಡುತ್ತಿಲ್ಲ. ಈ ಒಂದು ಮನಸ್ಥಿತಿಯನ್ನು ನಾವು ಮೊದಲು ಬದಲಿಸಬೇಕು.ನಮಗೆ ಹಾಡಲು ಕೇರಳದವರೇ ಆಗಬೇಕು. ಕೇರಳದವರನ್ನು ನಾಚಿಸುವಂತೆ ಮಾಡುವ ಹಲವು ಹಾಡುಗಾರರು ನಮ್ಮಲ್ಲಿದ್ದಾರೆ ಎಂಬುದನ್ನು ಸಾಹಿತ್ಯೋತ್ಸವ ತೋರಿಸಿ ಕೊಟ್ಟಿದೆ.

ಕೇರಳದವರಿಗೆ ಅವರ ವಾಹನ ಬಾಡಿಗೆ,ಸಮಯ ವಸತಿ,ಊಟಕ್ಕೆ ಸುರಿಯುವ ಸಾವಿರಾರು ರುಪಾಯಿ ನಿಮಗೆ ಉಳಿಸಬಹುದು.ಮತ್ತು ನಮ್ಮವರನ್ನು ಬೆಳೆಸಿ ಅವರನ್ನು ಗುರುತಿಸುವ ಕಾರ್ಯಕ್ಕೆ ನಾವು ಇನ್ನಾದರು ಇಳಿಯಬೇಕು.ಸಾಕಷ್ಟು ಮಲಯಾಳಂ,ಉರ್ದು ನಅತ್ ಗಳನ್ನು ನಿರರ್ಗಳವಾಗಿ ಹಾಡುವವರು, ಭಾಷಣ ಮಾಡುವವರುನಮ್ಮಡೆಯಲ್ಲಿದ್ದು ಅವರಿಗೆ ಅವಕಾಶ ಕಲ್ಪಿಸೋಣ.

error: Content is protected !! Not allowed copy content from janadhvani.com