janadhvani

Kannada Online News Paper

GCC ದೇಶಗಳಿಗೆ ಏಕೀಕೃತ ಪ್ರವಾಸಿ ವೀಸಾ ಕಾರ್ಯ ಪ್ರಗತಿಯಲ್ಲಿ- ಜಿಸಿಸಿ ಪ್ರ. ಕಾರ್ಯದರ್ಶಿ

ಏಕೀಕೃತ ವೀಸಾ GCC ಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕೇಂದ್ರೀಕೃತವಾಗಿದೆ. ಇದರಿಂದ ಜಿಸಿಸಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದರು.

ದೋಹಾ: ಎಲ್ಲಾ GCC ದೇಶಗಳಿಗೆ ಒಂದೇ ವೀಸಾದಲ್ಲಿ ಭೇಟಿ ನೀಡುವ ಅವಕಾಶ ಕಲ್ಪಿಸುವ ಏಕೀಕೃತ ಪ್ರವಾಸಿ ವೀಸಾ ಜಾರಿಗೆ ಸಂಬಂಧಿಸಿದಂತೆ ಕಾರ್ಯಗಳು ಪ್ರಗತಿಯಲ್ಲಿದೆ. ದೋಹಾದಲ್ಲಿ ನಡೆದ ಜಿಸಿಸಿ ಪ್ರವಾಸೋದ್ಯಮ ಸಚಿವರ ಸಭೆಯ ನಂತರ ಜಿಸಿಸಿ ಪ್ರಧಾನ ಕಾರ್ಯದರ್ಶಿ ಜಾಸಿಮ್ ಮುಹಮ್ಮದ್ ಅಲ್ ಬುದೈವಿ ಹೇಳಿದರು.

ಏಕೀಕೃತ ಪ್ರವಾಸಿ ವೀಸಾವು ಒಂದೇ ವೀಸಾದಲ್ಲಿ ಎಲ್ಲಾ ಜಿಸಿಸಿ ದೇಶಗಳಿಗೆ ಭೇಟಿ ನೀಡುವ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ದೋಹಾದಲ್ಲಿ ನಡೆದ 44 ನೇ ಜಿಸಿಸಿ ಶೃಂಗಸಭೆಯಲ್ಲಿ ವೀಸಾವನ್ನು ಅನುಮೋದಿಸಲಾಗಿದೆ. ವೀಸಾಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ತಾಂತ್ರಿಕ ಸಮಿತಿಗಳು ಪರಿಶೀಲಿಸುತ್ತಿವೆ ಎಂದು ಜಿಸಿಸಿ ಪ್ರಧಾನ ಕಾರ್ಯದರ್ಶಿ ಜಾಸಿಮ್ ಮೊಹಮ್ಮದ್ ಅಲ್ ಬುದೈವಿ ಹೇಳಿದ್ದಾರೆ.

ಏಕೀಕೃತ ವೀಸಾ GCC ಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕೇಂದ್ರೀಕೃತವಾಗಿದೆ. ಇದರಿಂದ ಜಿಸಿಸಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದರು. ಇದೇ ವೇಳೆ, ಜಿಸಿಸಿ ದೇಶಗಳು ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ತಾಣಗಳಾಗುತ್ತಿವೆ ಎಂದು ಕತಾರ್ ಪ್ರವಾಸೋದ್ಯಮ ಅಧ್ಯಕ್ಷ ಸಅದ್ ಬಿನ್ ಅಲಿ ಖರ್ಜಿ ಹೇಳಿದರು.

GCC ಯುನಿಫೈಡ್ ಟೂರಿಸ್ಟ್ ವೀಸಾ ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಒಮಾನ್ ಮತ್ತು ಕುವೈತ್‌ನ ನಿವಾಸಿಗಳ ನಡುವೆ ಚಲನೆಯ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ. ಇಲ್ಲಿನ ನಾಗರಿಕರಿಗೆ ವೀಸಾ ಮುಕ್ತ ಪ್ರಯಾಣ ಸಾಧ್ಯವಿರುವುದರಿಂದ, ಈ ದೇಶಗಳಲ್ಲಿ ವಾಸಿಸುವ ಲಕ್ಷಾಂತರ ವಿದೇಶೀಯರಿಗೆ ಹೊಸ ವೀಸಾ ಅನ್ವಯಿಸುತ್ತದೆ ಎಂದು ಭಾವಿಸಲಾಗಿದೆ.

error: Content is protected !! Not allowed copy content from janadhvani.com