janadhvani

Kannada Online News Paper

ಸೌದಿ: ಭಾರತೀಯ ಯುವಕ ವಾಸ ಸ್ಥಳದಲ್ಲಿ ಮೃತಪಟ್ಟ ನೆಲೆಯಲ್ಲಿ ಪತ್ತೆ

ಅವರು ತಮ್ಮ ಕುಟುಂಬದೊಂದಿಗೆ ದಮ್ಮಾಮ್ ಖತೀಫ್ನಲ್ಲಿ ವಾಸಿಸುತ್ತಿದ್ದರು. ವಾರದ ಹಿಂದೆ ಕುಟುಂಬಸ್ಥರು ಮನೆಗೆ ಮರಳಿದ್ದರು.

ಸೌದಿ ಅರೇಬಿಯಾ: ದಮಾಮ್‌ನ ನಬಿಯಾದಲ್ಲಿ ಮಲಯಾಳಿ ಯುವಕ ಮೃತಪಟ್ಟ ನೆಲೆಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರಿನ ವಯಕಾಂಕೋಡ್ ಪಯಶಾಯಿ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಶಂಸಾದ್ ಮೆನೋತಿ (32) ಅವರು ನಿವಾಸದಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ.

ಅವರು ತಮ್ಮ ಕುಟುಂಬದೊಂದಿಗೆ ದಮ್ಮಾಮ್ ಖತೀಫ್ನಲ್ಲಿ ವಾಸಿಸುತ್ತಿದ್ದರು. ವಾರದ ಹಿಂದೆ ಕುಟುಂಬಸ್ಥರು ಮನೆಗೆ ಮರಳಿದ್ದರು. ನಾರತ್‌ ಮೂಲದ ಆದಿಲಾ ಪತ್ನಿ. ಅವರಿಗೆ ಒಂದು ಹೆಣ್ಣು ಮತ್ತು ಗಂಡು ಇಬ್ಬರು ಮಕ್ಕಳಿದ್ದಾರೆ.ಹತ್ತು ವರ್ಷಗಳಿಂದ ದಮಾಮ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಮೃತದೇಹವನ್ನು ಖತೀಫ್ ಸೆಂಟ್ರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಖತೀಫ್ ಕೆಎಂಸಿಸಿ ನೇತೃತ್ವದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ.