janadhvani

Kannada Online News Paper

ಹಯ್ಯಾ ವೀಸಾ ಅವಧಿ ಮುಕ್ತಾಯ- ಫೆಬ್ರವರಿ 24 ರೊಳಗೆ ದೇಶ ತೊರೆಯಬೇಕು

ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ವಿದೇಶಿಯರಿಗೆ ಕತಾರ್ ಪ್ರವೇಶದ ಏಕೈಕ ರೂಪವಾಗಿತ್ತು ಹಯ್ಯಾ ವೀಸಾ.

ದೋಹಾ: ಹಯಾ ವೀಸಾ ಮೂಲಕ ಕತಾರ್‌ಗೆ ಆಗಮಿಸುವ ಅವಧಿ ಮುಕ್ತಾಯಗೊಂಡಿದೆ. ಹಯಾ ವೀಸಾದಲ್ಲಿರುವವರು ಫೆಬ್ರವರಿ 24 ರವರೆಗೆ ಇರಬಹುದಾಗಿದೆ. ಅದೇ ಸಮಯದಲ್ಲಿ, ಟೂರಿಸ್ಟ್ ವೀಸಾಗಳಾದ ಹಯ್ಯಾ ಎ ಒನ್, ಎ ಟು ಮತ್ತು ಎ ತ್ರೀ ವೀಸಾಗಳು ಮುಂದುವರಿಯಲಿದೆ.

ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ವಿದೇಶಿಯರಿಗೆ ಕತಾರ್ ಪ್ರವೇಶದ ಏಕೈಕ ರೂಪವಾಗಿತ್ತು ಹಯ್ಯಾ ವೀಸಾ. ವಿಶ್ವಕಪ್ ನಂತರ, ವೀಸಾ ಅವಧಿಯನ್ನು ಜನವರಿ 24 ರವರೆಗೆ ಮತ್ತು ಏಷ್ಯನ್ ಕಪ್‌ಗಾಗಿ ನಂತರ ಫೆಬ್ರವರಿ 24 ರವರೆಗೆ ವಿಸ್ತರಿಸಲಾಯಿತು.

ಆದರೆ ಈ ವೀಸಾದಲ್ಲಿ ಕತಾರ್‌ಗೆ ಪ್ರವೇಶಿಸಲು ಫೆಬ್ರವರಿ 10 ರವರೆಗೆ ಗಡುವು ನಿಗದಿಪಡಿಸಲಾಗಿತ್ತು. ಹಯ್ಯ ಮತ್ತು ಹಯ್ಯ ವಿಥ್ ಮಿ ವೀಸಾದಲ್ಲಿ ಕತಾರ್‌ಗೆ ಆಗಮಿಸಿದವರು ಫೆಬ್ರವರಿ 24 ರೊಳಗೆ ಹಿಂತಿರುಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕೃತರು ಎಚ್ಚರಿಸಿದ್ದಾರೆ.

error: Content is protected !! Not allowed copy content from janadhvani.com