janadhvani

Kannada Online News Paper

ವಲಸಿಗರು 30 ದಿನಗಳೊಳಗೆ ರೆಸಿಡೆನ್ಸಿ ಪರವಾನಗಿ ಪಡೆದಿರಬೇಕು- ವಿಫಲರಾದಲ್ಲಿ 10 ಸಾವಿರ ರಿಯಾಲ್‌ ದಂಡ

ಈ ಹಿಂದೆ, ಕತಾರ್‌ನಲ್ಲಿ ಉದ್ಯೋಗವನ್ನು ಬಯಸುವವರಿಗೆ ನಿವಾಸ ಪರವಾನಗಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಮೂರು ತಿಂಗಳವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.

ದೋಹಾ: ಕತಾರ್‌ಗೆ ಆಗಮಿಸುವ ವಲಸಿಗರು 30 ದಿನಗಳೊಳಗೆ ರೆಸಿಡೆನ್ಸಿ ಪರವಾನಗಿಯನ್ನು ಸಿದ್ಧಪಡಿಸಬೇಕು ಎಂದು ಆಂತರಿಕ ಸಚಿವಾಲಯ ಸೂಚಿಸಿದೆ. ಈ ನಿಟ್ಟಿನಲ್ಲಿ ವಿಫಲರಾದವರಿಗೆ 10,000 ರಿಯಾಲ್‌ಗಳವರೆಗೆ ದಂಡ ವಿಧಿಸಲಾಗುತ್ತದೆ.

ಈ ಹಿಂದೆ, ಕತಾರ್‌ನಲ್ಲಿ ಉದ್ಯೋಗವನ್ನು ಬಯಸುವವರಿಗೆ ನಿವಾಸ ಪರವಾನಗಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಮೂರು ತಿಂಗಳವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಆಂತರಿಕ ಸಚಿವಾಲಯದ ಹೊಸ ಎಚ್ಚರಿಕೆಯ ಪ್ರಕಾರ, ರೆಸಿಡೆನ್ಸಿ ಪರವಾನಗಿಗೆ ಸಂಬಂಧಿಸಿದ ಎಲ್ಲಾ ಕಾರ್ಯವಿಧಾನಗಳನ್ನು ಕತಾರ್‌ಗೆ ಆಗಮಿಸಿದ 30 ದಿನಗಳಲ್ಲಿ ಪೂರ್ಣಗೊಳಿಸಬೇಕು.

ಕಾನೂನನ್ನು ಉಲ್ಲಂಘಿಸಿದರೆ 10,000 ಕತಾರಿ ರಿಯಾಲ್‌ಗಳವರೆಗೆ ದಂಡ ವಿಧಿಸಲಾಗುತ್ತದೆ. ಉದ್ಯೋಗದಾತರು ಮತ್ತು ವಲಸಿಗರಿಗೆ ಈ ವಿಷಯದಲ್ಲಿ ಜಾಗರೂಕರಾಗುವಂತೆ ಮತ್ತು ನಿಯಮಗಳನ್ನು ಅನುಸರಿಸುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಚಿವಾಲಯವು ಮನವಿ ಮಾಡಿದೆ.

error: Content is protected !! Not allowed copy content from janadhvani.com