janadhvani

Kannada Online News Paper

ಸಅದಿಯಾ ಫೌಂಡೇಷನ್ ಬೆಂಗಳೂರು- 20 ನೇ ವರ್ಷಾಚರಣೆಯ ಘೋಷಣೆ ಹಾಗೂ ಸನದುದಾನ

ಪ್ರಸ್ತುತ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಐಬಿಎಡ್ ಹಾಗೂ ಇಸ್ಲಾಮಿಕ್ ದಅವಾ ಕೋರ್ಸ್ ಪೂರ್ಣಗೊಳಿಸಿದ 52 ವಿದ್ಯಾರ್ಥಿಗಳು ಪದವಿ ಪಡೆದರು.

ಬೆಂಗಳೂರು: ಸಅದಿಯ್ಯಾ ಫೌಂಡೇಷನ್ ಬೆಂಗಳೂರು ಸಂಸ್ಥೆಯ 20ನೇ ವರ್ಷಾಚರಣೆಯ ಉದ್ಘಾಟನೆ ಹಾಗೂ ಸನದುದಾನ ಕಾರ್ಯಕ್ರಮವು ಬುಧವಾರ ನಡೆಯಿತು. ಸಂಸ್ಥೆಯ 20ನೇ ವಾರ್ಷಿಕ ಘೋಷಣೆ ಹಾಗೂ ಒಂದು ವರ್ಷದ ವಿವಿಧ ಕಾರ್ಯಕ್ರಮಗಳನ್ನು ಇದೇ ಸಂದರ್ಭ ಘೋಷಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ರವರು, ಶಿಕ್ಷಣದಿಂದ ಮಾತ್ರ ಮುಸ್ಲಿಂ ಸಮುದಾಯದ ಪ್ರಗತಿ ಸಾಧ್ಯ, ಸಅದಿಯಾದ ಶಿಕ್ಷಣ ವ್ಯವಸ್ಥೆ ಇಡೀ ರಾಜ್ಯಕ್ಕೆ ವಿಸ್ತರಿಸಲು ಸಂಸ್ಥೆಯ ಸಾರಥಿ ಶಾಫಿ ಸಅದಿ ಮತ್ತು ವೇದಿಕೆಯಲ್ಲಿದ್ದ ಉಲಮಾಗಳಿಗೆ ವಿನಂತಿಸಿದರು.

ರಾಜ್ಯದ ಸ್ಲಂಗಳಲ್ಲಿ ವಾಸ ಮಾಡುವ ಮುಸ್ಲಿಂ ಕುಟುಂಬಗಳಿಗೆ ಆಶಾಕಿರಣವಾಗಿ ಬೆಳೆಯುತ್ತಿರುವ ಬೆಂಗಳೂರು ಸಅದಿಯ ಸ್ಲಂ ಬಾಲಕ,ಬಾಲಕಿಯರ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ವದ ಮೈಲುಗಲ್ಲಾಗಿದ್ದು. ಹನಫಿ ವಲಯದಲ್ಲಿ ಕೇರಳ ಮಾಡೆಲ್ ವಿದ್ಯಾಭ್ಯಾಸವನ್ನು ಪರಿಚಯಿಸಿದ ಮೊದಲಸಂಸ್ಥೆಯಾಗಿದೆ. 20 ನೇ ವರ್ಷಾಚರಣೆಯ ಘೋಷಣಾ ಸಂಗಮದಲ್ಲಿ ಸಂಸ್ಥೆಯು ಹಾಕಿಕೊಂಡಿರುವ 20 ಯೋಜನೆಗಳು ಸಮುದಾಯಕ್ಕೆ ಹೊಸ ಭರವಸೆಯಾಗಲಿದೆ.

ಇದರ ಭಾಗವಾಗಿ ನಡೆದ ದಸ್ತರ್ ಬಂಧಿ ಘೋಷಣಾ ಕಾರ್ಯಕ್ರಮವು ಸಂಸ್ಥೆಯ ಉಪಾಧ್ಯಕ್ಷರಾದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನಾಯಕತ್ವದಲ್ಲಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಐಬಿಎಡ್ ಹಾಗೂ ಇಸ್ಲಾಮಿಕ್ ದಅವಾ ಕೋರ್ಸ್ ಪೂರ್ಣಗೊಳಿಸಿದ 52 ವಿದ್ಯಾರ್ಥಿಗಳಿಗೆ ಮೌಲವಿ ಫಾಝಿಲ್ ಅಸ್ ಅದಿ ಪದವಿ (ಸನದು) ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಪ್ರದಾನ ಮಾಡಿದರು.

ನೇಪಾಳ,ಯುಪಿ,ಬಿಹಾರ,ಮುಂಬಯಿ,ಕರ್ನಾಟಕ ಹಾಗೂ ಕೇರಳದ ಈ 52 ವಿದ್ಯಾರ್ಥಿಗಳು,ಕುರ್‌’ಆನ್ ಆಂಡ್ ಮಾಡರ್ನ್ ಸೈನ್ಸ್‌ ತಿಬ್ಬುನ್ನಬಿಯಲ್ಲಿ ಪ್ರಾವೀಣ್ಯತೆ ಹಾಗೂ ತ್ರಿಭಾಷಾ ನೈಪುಣ್ಯತೆ ಹೊಂದಿದ್ದಾರೆ.

ಕಾಸರಗೋಡು ಜಾಮಿಯಾ ಸಅದಿಯ ವೈಸ್ ಪ್ರಿನ್ಸಿಪಾಲ್ ಮೌಲಾನಾ ಮುಹಮ್ಮದ್ ಅಲಿ ಸಖಾಫಿ ಸನದುದಾನ ಭಾಷಣ ಮಾಡಿದರು. ಸಂಸ್ಥೆಯ ಸಾರಥಿ ಮೌಲಾನಾ ಎನ್. ಕೆ. ಎಂ ಶಾಫಿ ಸಅದಿ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು.

ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಮುಪ್ತಿ ಶಬೀರ್ ಅಹ್ಮದ್ ರಝಾ ಖಾರಿ ಝುಲ್ಫಿಕರ್ ನೂರಿ, ಸಅದಿಯಾ ಇಸ್ಲಾಮಿಕ್ ಬಿಎಡ್ ಪ್ರಾಧ್ಯಾಪಕರಾದ ಉಸ್ತಾದ್ ಅಬ್ದುಲ್ಲತೀಫ್ ಸಅದಿ, ಇಸ್ಮಾಯಿಲ್ ಉಸ್ತಾದ್, ಅಬ್ದುಲ್ ಸಮದ್‌ ಅಹ್ಸನಿ, ಅನಸ್ ಸಿದ್ದೀಖಿ ಅಸ್ಸಖಾಫಿ, ಇಸ್ಮಾಯಿಲ್ ಸಅದಿ ಕಿನ್ಯಾ ಬಶೀರ್ ಸಅದಿ ವಿರಾಜಪೇಟೆ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವ‌ರ್ ಭಾಷಾ, ಮಾಜೀ ಅಧ್ಯಕ್ಷ ರಿಯಾಝ್ ಖಾನ್ ವೇದಿಕೆಯಲ್ಲಿದ್ದರು.

ಯಾಕೂಬ್ ಯೂಸುಫ್, ಇಂಡಿಯನ್ ಬಿಲ್ಡ‌ರ್ ಮಾಲಕ ಝಿಯಾಉಲ್ಲಾಹ್ ಶರೀಫ್, ಲಿಟಲ್ ಫ್ಲವರ್ ಸಮೂಹಸಂಸ್ಥೆಯ ಇಕ್ಬಾಲ್ ಅಹ್ಮದ್‌, ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಸುಹೈಲ್ ಅಹ್ಮದ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವ, ಶಾಪ್ ನ್ ಸೇವ್ ಮಹಮೂದ್, ಮೊಯ್ದಿನ್ ಒ.ಪಿ, ಹಮೀದ್ ಹಾಜಿ, ಶುಕೂರ್ ಹಾಜಿ,ಕಲಂದರ್ ಉಸ್ಮಾನ್ ಮಿತ್ತೂರ್ ಮುಂತಾದವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ‘ಸಅದಿಯಾ ಹ್ಯಾಪಿ ಲಿವಿಂಗ್ ಝೋನ್’ 3D ಯನ್ನು ಸಚಿವ ಜಮೀರ್ ಅಹ್ಮದ್ ಲೋಕಾರ್ಪಣೆ ಮಾಡಿದರು.

error: Content is protected !! Not allowed copy content from janadhvani.com