janadhvani

Kannada Online News Paper

ಕುವೈತ್ ಕುಟುಂಬ ವೀಸಾ ನಿಯಮಗಳಲ್ಲಿ ಬದಲಾವಣೆ- ಮೊದಲ ದಿನವೇ 1,800 ಅರ್ಜಿ ಸಲ್ಲಿಕೆ

ದೀರ್ಘ ಕಾಲದಿಂದ ಸ್ಥಗಿತಗೊಂಡಿದ್ದ ವಿದೇಶೀ ವೀಸಾ ಪ್ರಕ್ರಿಯೆಗೆ ಕಳೆದ ದಿನ ಮತ್ತೆ ಚಾಲನೆ ನೀಡಲಾಗಿದೆ.

ಕುವೈತ್ ಸಿಟಿ: ಕುಟುಂಬ ವೀಸಾ ನಿಯಮಗಳಲ್ಲಿ ಬದಲಾವಣೆಯಾದ ಮೊದಲ ದಿನವೇ ಕುವೈತ್‌ನಲ್ಲಿ 1,800 ಮಂದಿ ಕುಟುಂಬ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ರಕ್ಷಣಾ ಸಚಿವ ಮತ್ತು ಆಂತರಿಕ ಕಾರ್ಯನಿರ್ವಾಹಕ ಸಚಿವರಾದ ಶೈಖ್ ಫಹದ್ ಅಲ್-ಯೂಸುಫ್, ವೀಸಾ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ಕುಟುಂಬ ವೀಸಾವನ್ನು ಅನುಮೋದಿಸಿದರು.

ದೀರ್ಘ ಕಾಲದಿಂದ ಸ್ಥಗಿತಗೊಂಡಿದ್ದ ವಿದೇಶೀ ವೀಸಾ ಪ್ರಕ್ರಿಯೆಗೆ ಕಳೆದ ದಿನ ಮತ್ತೆ ಚಾಲನೆ ನೀಡಲಾಗಿದೆ. ದೇಶದ ಆರು ಗವರ್ನರೇಟ್‌ಗಳಲ್ಲಿನ ರೆಸಿಡೆನ್ಸಿ ಅಫೇರ್ಸ್ ಇಲಾಖೆಗಳಲ್ಲಿ ಸ್ವೀಕರಿಸಿದ 1,800 ಅರ್ಜಿಗಳ ಪೈಕಿ 1,165 ಅರ್ಜಿಗಳು ನಿಗದಿತ ಷರತ್ತುಗಳನ್ನು ಪೂರೈಸದ ಕಾರಣ ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ, 800 ದಿನಾರ್‌ಗಳ ಸಂಬಳ ಮತ್ತು ವಿಶ್ವವಿದ್ಯಾಲಯದ ಪದವಿ ಹೊಂದಿರುವ ವಲಸಿಗರಿಗೆ ವೀಸಾಗಳನ್ನು ನೀಡಲಾಗುತ್ತದೆ, ಪದವಿ ಹೊಂದಿರುವ ಅದೇ ಕ್ಷೇತ್ರದಲ್ಲಿ ಕೆಲಸ ಇರಬೇಕು. ಪ್ರಸ್ತುತ, ಕುಟುಂಬ ವೀಸಾವನ್ನು ಹೆಂಡತಿ ಮತ್ತು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.

ಪಾಸ್‌ಪೋರ್ಟ್, ಸಿವಿಲ್ ಐಡಿ, ಸಂಬಳ ಪ್ರಮಾಣಪತ್ರ, ಆಯಾ ದೇಶಗಳ ವಿದೇಶಾಂಗ ಸಚಿವಾಲಯ ಮತ್ತು ಕುವೈತ್‌ನ ವಿದೇಶಾಂಗ ಸಚಿವಾಲಯ ದೃಢೀಕರಿಸಿದ ಪದವಿ ಪ್ರಮಾಣಪತ್ರ, ಕುಟುಂಬ ಸಂಬಂಧ ಅಫಿಡವಿಟ್ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಹೊಸ ಸುಧಾರಣೆಯ ಮೂಲಕ ಕೆಲವು ವೃತ್ತಿಗಳಿಗೆ ಪ್ರಸ್ತುತ ಶರತ್ತುಗಳಿಂದ ವಿನಾಯಿತಿ ನೀಡಲಾಗಿದೆ. ಕುಟುಂಬ ಭೇಟಿ ವೀಸಾಗಳು ಆರಂಭಗೊಂಡಿಲ್ಲ. ನಿಬಂಧನೆಗಳಿಗೆ ಒಳಪಟ್ಟು ವಾಣಿಜ್ಯ ಭೇಟಿಗಳನ್ನು ಅನುಮತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com