ರಿಯಾದ್: ಇನ್ನು ಮುಂದೆ ಸೌದಿಯಲ್ಲಿ ಎಲ್ಲಾ ಬಸ್‌ಗಳು ಮತ್ತು ಟ್ರಕ್‌ಗಳನ್ನು ಮೇಲ್ವಿಚಾರಣೆ ಮಾಡಲು ಸ್ವಯಂಚಾಲಿತ ಕ್ಯಾಮೆರಾಗಳು ಕಾರ್ಯಾಚರಿಸಲಿದೆ. ಏಪ್ರಿಲ್ 21 ರಿಂದ, ಎಲ್ಲಾ ಉಲ್ಲಂಘನೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗುತ್ತದೆ. ದಾಖಲೆಗಳು ಮತ್ತು ಪರವಾನಗಿಗಳಿಲ್ಲದ ಟ್ರಕ್‌ಗಳು ಮತ್ತು ಬಸ್‌ಗಳು ದಂಡವನ್ನು ಶೀಘ್ರ ಪಾವತಿಸಬೇಕಾಗುತ್ತದೆ.
ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಬಸ್‌ಗಳು ಮತ್ತು ಟ್ರಕ್‌ಗಳ ಮೇಲೆ ಇನ್ನು ಮುಂದೆ ಕ್ಯಾಮೆರಾ ಕಣ್ಗಾವಲು ಇರಲಿದೆ. ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಚಾಲ್ತಿಯಲ್ಲಿರುವ ಕಾರ್ಡ್ ಅಥವಾ ಆಪರೇಷನ್ ಕಾರ್ಡ್ ಇಲ್ಲದೆ ಚಾಲನೆ ಮಾಡುವ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗುತ್ತದೆ. ಅಲ್ಲದೇ ಅವಧಿ ಮೀರಿದ ಬಸ್ ಗಳನ್ನು ರಸ್ತೆಗಿಳಿಸಿದರೂ ಕ್ಯಾಮೆರಾ ಪತ್ತೆ ಹಚ್ಚಲಿದೆ.
ದೇಶದಲ್ಲಿ ಕಾರ್ಗೋ ಟ್ರಕ್‌ಗಳು, ಬಾಡಿಗೆ ಟ್ರಕ್‌ಗಳು, ಅಂತರರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸುವ ಬಸ್‌ಗಳು, ಬಾಡಿಗೆಗೆ ಪಡೆಯುವ ಬಸ್‌ಗಳು ಇತ್ಯಾದಿಗಳನ್ನು ಈ ರೀತಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. 2022 ರಲ್ಲಿ ಘೋಷಿಸಲಾದ ಯೋಜನೆಯ ಮೊದಲ ಹಂತದಿಂದ, ಇಡೀ ದೇಶದ ಟ್ಯಾಕ್ಸಿಗಳು ಕಣ್ಗಾವಲಿನಲ್ಲಿವೆ.
ಎರಡನೇ ಹಂತದಲ್ಲಿ ಶಿಕ್ಷಣ ಸಂಸ್ಥೆಗಳ ಬಸ್‌ಗಳ ಮೇಲೆ ನಿಗಾ ಇಡಲಾಗಿದೆ. ಕಣ್ಗಾವಲು ಕ್ಯಾಮೆರಾಗಳಲ್ಲಿ ಸೆರೆಯಾದ ವಾಹನಗಳಿಂದ ಅದೇ ಗಳಿಗೆಯಲ್ಲಿ ದಂಡವನ್ನು ಸಂಗ್ರಹಿಸಲಾಗುತ್ತದೆ. ಈ ಯೋಜನೆಯು ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯನ್ನು ವಿಷನ್ 2030 ರ ಭಾಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.