ಮೂಡುಬಿದಿರೆ: ಸ್ಪಿರಿಟ್ ಆಫ್ ಖುರ್ಆನ್ ಹಾಗೂ ಬುರ್ದಾ ಮಜ್ಲಿಸ್ ನ 8 ನೇ ವಾರ್ಷಿಕವು ಜನವರಿ 25,26,27 ಮೂಡಬಿದ್ರೆಯ ಲಾಡಿಯಲ್ಲಿ ನಡೆಯಲಿದೆ.
25-01-2024
ಸಂಜೆ 04:30ಕ್ಕೆ ಸರಿಯಾಗಿ ಕೋಟೆಬಾಗಿಲು ಹಝ್ರತ್ ವಲಿಯುಲ್ಲಾಹಿ ಚಮನ್ ಷಾ ದರ್ಗಾ ಶರೀಫ್ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಮಗ್ರಿಬ್ ನಮಾಝಿನ ನಂತರ ಅಸ್ಮಾವುಲ್ ಬದ್ರ್ ಹಾಗು ಮುಹ್ಯಿದ್ಧೀನ್ ಮಾಲೆ ರಶೀದ್ ಕೆರೆಬಳಿ ವಿದ್ಯಾರ್ಥಿ ಮರ್ಕಝ್ ಕೈಕಂಬ ಇವರ ನೇತೃತ್ವ ದಲ್ಲಿ ಮುಹಮ್ಮದ್ ವೇದಿಕೆ ಲಾಡಿ ಮೂಡಬಿದ್ರೆಯಲ್ಲಿ ನಡೆಯಲಿದೆ.
ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ರವರ ಅಧ್ಯಕ್ಷತೆ ಮತ್ತು ದುಆದೊಂದಿಗೆ ಚಾಲನೆಗೊಂಡು, ಪಿಪಿ ಅಹ್ಮದ್ ಸಖಾಫಿ ಕಾಶಿಫಟ್ನ ಉಸ್ತಾದರು ಉದ್ಘಾಟನೆ ಮಾಡಲಿದ್ದಾರೆ.ಬಹು.ನೌಫಲ್ ಸಖಾಫಿ ಕಳಸ ಉಸ್ತಾದರು ಮುಖ್ಯ ಪ್ರಭಾಣಗೈಯ್ಯಲಿದ್ದಾರೆ.
26-01-2024
ಮಗ್ರಿಬ್ ನಮಾಝಿನ ನಂತರ ನೂರುಸ್ಸಾದಾತ್ ಬಾಯಾರ್ ತಂಙಳರ ಪ್ರಾರ್ಥನೆಯೊಂದಿಗೆ, ಬಹು. ಹಾಫಿಳ್ ಸುಫಿಯಾನ್ ಸಖಾಫಿ ಉಸ್ತಾದರ ಪ್ರಾಸ್ತಾವಿಕ ಭಾಷಣ ಮತ್ತು ಬಹು. ಮಸ್ಹೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
27-01-2024
ಮಗ್ರಿಬ್ ನಮಾಝಿನ ನಂತರ
ಅಸಯ್ಯಿದ್ ಕಾಜೂರು ತಂಙಳ್ ರ ಪ್ರಾರ್ಥನೆಯೊಂದಿಗೆ ಬಹು. ಹುಸೈನ್ ಮುಈನಿ ಅಲ್-ಅಹ್ಸನಿ ಉಸ್ತಾದರ ಸ್ಪಿರಿಟ್ ಆಫ್ ಖುರ್ಆನ್ ತರಗತಿ ಹಾಗೂ ಅಸಯ್ಯಿದ್ ತ್ವಾಹಾ ತಂಙಳ್ ಪೂಕಟ್ಟೂರು,, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಶಾಹಿನ ಬಾಬು ತಾನೂರು ಹಾಗೂ ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ಮತ್ತು ನಅತ್ ನೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.