janadhvani

Kannada Online News Paper

ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್- ನೂತನ ಪದಾಧಿಕಾರಿಗಳು

ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್ ಇದರ ವಾರ್ಷಿಕ ಮಹಾಸಭೆಯು ಜ.18- 2024 ರಂದು ಸಲಾಮದ ಕಾಸರಗೋಡು ನಿವಾಸದಲ್ಲಿ ಸಂಘದ ಅಧ್ಯಕ್ಷರಾದ ಅನಸ್ ಕುದ್ಲೂರು ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.

ಕೋಶಾಧಿಕಾರಿ ಅಬ್ದುಲ್ ರಝಾಕ್ ಕೊಡಂಗಾಯಿ ದುಆ ನೆರವೇರಿಸಿ, ನೆರೆದ ಸಭಿಕರನ್ನು ಪ್ರೀತಿಯಿಂದ ಬರಮಾಡಿ ಸ್ವಾಗತಿಸಿ, ಸಹಾಯ ಸಹಕಾರ ನೀಡುತ್ತ ಬಂದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಘಟನೆಯ ಸದಸ್ಯರು ರಾಜ್ಯ, ಭಾಷೆ, ವೈಯಕ್ತಿಕ ಸಂಘಟನಾ ನಿಷ್ಠೆಗಳನ್ನು ಮರೆತು ಏಕೋದರ ಸಹೋದರರಂತೆ ಆತ್ಮಾರ್ಥವಾಗಿ ಸಹಕಾರ ನೀಡುತ್ತಾ ಬಂದಿರುವುದರಿಂದ ಹಲವಾರು ಯಶಸ್ವಿ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು ಎಂಬುದನ್ನು ಸ್ಮರಿಸಿದರು.

ಉದ್ಘಾಟಿಸಿ ಮಾತನಾಡಿದ ಮಾಜಿ ಅಧ್ಯಕ್ಷರಾದ ಸಲೀಂ ಪಲ್ಲಕುಡಲ್ ಹತ್ತು ಹಲವು ಊರಿನ ವಿಭಿನ್ನ ಭಾಷೆಗಳ, ವಿಭಿನ್ನ ಸಂಘಟನೆಗಳ ಪರವಾಗಿರುವ ಜನರಿದ್ದರೂ ಅದೆಲ್ಲವನ್ನೂ ಮರೆತು ಸಂಘಟನೆಯ ಧ್ಯೇಯವನ್ನೇ ಪ್ರಧಾನವಾಗಿರಿಸಿಕೊಂಡು ಮುನ್ನಡೆಯುತ್ತ ಬಂದಿರುವುದನ್ನು ಶ್ಲಾಘಿಸಿದರು._

ಪ್ರಧಾನ ಕಾರ್ಯದರ್ಶಿ ಫವಾಝ್ ಬಾಯಾರ್ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದ್ದನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು.ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಮತ್ತು ಹಲವು ತೀರ್ಮಾನ ಕೈಗೊಳ್ಳಲಾಯಿತು.

2024-25 ಸಾಲಿನ ನೂತನ ಪದಾಧಿಕಾರಿಗಳು

ಅಧ್ಯಕ್ಷರು: ರಶೀದ್ ವಲಚ್ಚಿಲ್

ಪ್ರಧಾನ ಕಾರ್ಯದರ್ಶಿ: ಹಫೀಝ್ ಅಡ್ಡೂರು

ಕೋಶಾಧಿಕಾರಿ: ರಿಯಾಝ್ ಉಳ್ಳಾಲ

ಉಪಾಧ್ಯಕ್ಷರುಗಳು: ದಾವೂದ್ ಗುರುಪುರ,ಮಲಿಕ್ ಇಡ್ಯಾ

ಜೊತೆ ಕಾರ್ಯದರ್ಶಿಗಳು:
ಅಲ್ತಾಫ್ ಗುರುಪುರ,ಹಸೈನಾರ್ ಕೊಡಂಗಾಯಿ

ಮೀಡಿಯಾ ಚೇರ್ಮಾನ್ ಖಾದರ್ ಕೊಡಂಗಾಯಿ

ಕನ್ವೀನರ್ ಗಳು:
ಸಲೀಂ ಪಲ್ಲಕುಡಲ್,ಅಬ್ದುಲ್ ರಝಾಕ್ ಕೊಡಂಗಾಯಿ

ಕಾರ್ಯಕಾರಿ ಸಮಿತಿ ಸದಸ್ಯರು:
ಫವಾಝ್ ಬಾಯರ್ ಅನಸ್ ಉಪ್ಪಿನಂಗಡಿ, ಅಝ್ವೀರ್ ಗಾಣೆಮಾರ್,ಸಿದ್ದೀಕ್ ಚಿಪ್ಪಾರ್,
ಅಶ್ರಫ್ ಅಡ್ಕ.

ಕೊನೆಯಲ್ಲಿ ರಿಯಾಝ್ ಉಳ್ಳಾಲ ಧನ್ಯವಾದವಿತ್ತರು.‌

ವರದಿ: ಅಬೂ ಅಯಾನ್ ಕೊಡಂಗಾಯಿ.

error: Content is protected !! Not allowed copy content from janadhvani.com