janadhvani

Kannada Online News Paper

SჄS 30: ಮಹಾ ಸಮ್ಮೇಳನ ಯಶಸ್ಸಿಗೆ ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ಕರೆ

ಅಹ್ಲುಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶವನ್ನು ಎತ್ತಿ ಹಿಡಿಯಲೆಂದೇ ಸ್ಥಾಪಿತವಾದ ಸುನ್ನಿ ಯುವಜನ ಸಂಘ ಅದರ ಜನ್ಮನಾಡಾದ ಕೇರಳದಲ್ಲಿ 1954ರಲ್ಲಿ ಪ್ರಾರಂಭಗೊಂಡು ಇದೀಗ 70 ಪೂರ್ತಿಯಾದ ಸಂಭ್ರಮದಲ್ಲಿದೆ.

ಕರ್ನಾಟಕದಲ್ಲಿಯೂ ಮಹಾನ್ ವಿದ್ವಾಂಸರಾದ ತಾಜಲ್ ಫುಖಹಾ ಬೇಕಲ್ ಉಸ್ತಾದ್ ರವರ ನೇತೃತ್ವದಲ್ಲಿ 1994ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು, ಇದೀಗ 30ರ ಸಡಗರ ಸಂಭ್ರಮವನ್ನು ಆಚರಿಸುತ್ತಿದೆ. ಅದರ 30ನೇ ವರ್ಷಾಚರಣೆಯು ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಇದೇ ಬರುವ ಜನವರಿ 24, 2024ರ ಬುಧವಾರದಂದು ಅಡ್ಯಾರಿನ ಶಾಗಾರ್ಡನ್ ಗ್ರೌಂಡಿನಲ್ಲಿ ಅದ್ದೂರಿಯ ಮಹಾ ಸಮ್ಮೇಳನ ನಡೆಯುತ್ತಿದೆ.

ಪ್ರಕಾಂಡ ಸಯ್ಯಿದ್ ಕುಟುಂಬಸ್ತರು, ವಿದ್ವಾಂಸರುಗಳು, ರಾಜಕೀಯ ಮುಖಂಡರುಗಳು, ಸಾಮಾಜಿಕ ಧುರೀಣರು ,ಸುನ್ನೀ ಕಾರ್ಯಕರ್ತರ ದಂಡೇ ಆಗಮಿಸಲಿದೆ. ಪ್ರಸ್ತುತ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಅದಿ ವಿದ್ವಾಂಸರುಗಳು ಪ್ರಚಾರಗಳನ್ನು ಗೈಯುತ್ತಾ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಅದಿ ಕಂಕನಾಡಿರವರು ಕರೆ ನೀಡಿದ್ದಾರೆ.

ವರದಿ -ಇಂಜಿನಿಯರ್ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಕಾಮಿಲ್ ಬಜ್ಪೆ (ಪ್ರಧಾನ ಕಾರ್ಯದರ್ಶಿ,ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ)

error: Content is protected !! Not allowed copy content from janadhvani.com