janadhvani

Kannada Online News Paper

ಪೂಂಜಾ ತನ್ನ ಕುಟುಂಬದಿಂದ ನಾರಿ ಸಂತತಿಯೊಂದನ್ನು ದೇಶಕ್ಕೆ ಕೊಡುಗೆ ನೀಡಲಿ- ಕೆ.ಅಶ್ರಫ್

ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ.

ಮಂಗಳೂರು: ಇತ್ತೀಚೆಗೆ ಶಾಸಕ ಹರೀಶ್ ಪೂಂಜಾರವರು ಹೇಳಿಕೆ ನೀಡಿ,ಮುಸ್ಲಿಮ್ ಸಮುದಾಯದ ಕುಟುಂಬಗಳು ನಾಲ್ಕು ಸಂತತಿಯನ್ನು ಹೊಂದಿದರೆ ದೇಶದ ಮುಸ್ಲಿಮರ ಜನಸಂಖ್ಯೆ ಎಂಬತ್ತು ಕೋಟಿ ತಲುಪುತ್ತದೆ ಎಂದಿದ್ದಾರೆ.

ಪೂಂಜಾರವರ ಈ ಹೇಳಿಕೆ ಇಲ್ಲಿನ ಮುಸ್ಲಿಮೇತರ ಸಮುದಾಯವನ್ನು ಮೂರ್ಖರನ್ನಾಗಿಸುವುದಾಗಿದೆ. ದೇಶದ ಜನಸಂಖ್ಯೆಯ ಬಗ್ಗೆ ಈಗಾಗಲೇ ಸಾಮಾಜಿಕ ತಜ್ಞರು ನೀಡಿದ ವರದಿಯನ್ನು ಇನ್ನೂ ಪೂಂಜಾರವರು ಅರಿತಿಲ್ಲ. ಯತೇಚ್ಛ ಮಾನವ ಸಂಪನ್ಮೂಲವನ್ನು ಹೊಂದಿದ ನಮ್ಮ ದೇಶ ಇಂದು ಅಭಿವೃದ್ಧಿ ಹೊಂದಿರುವುದು ಮಾನವ ಸಂಪನ್ಮೂಲಗಳಿಂದಲೇ ಎಂದು ಪೂಂಜಾ ತಿಳಿಯಲಿ.

ಪೂಂಜಾ ಅವರು ಈ ದೇಶಕ್ಕೆ ನಾರಿ ಸಂತಾನ ವೊಂದನ್ನಾದರೂ ಕೊಡುಗೆ ನೀಡಿದರೆ ಅವರು ಇತರ ಸಮುದಾಯಗಳಿಗೆ ನೀಡುತ್ತಿರುವ ಸಂತಾನ ಮಿತಿಯನ್ನು ಮೀರಿದಂತೆ ಕೂಡಾ ಆಗುತ್ತದೆ. ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ. ಶೀಘ್ರಮ್ ಪುತ್ರಿ ಭಾಗ್ಯ ಮ್ ಪ್ರಾಪ್ತಿ ರಸ್ತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com