janadhvani

Kannada Online News Paper

ಬದ್ರಿಯಾ ಜುಮಾ ಮಸ್ಚಿದ್ ಕನ್ಯಾಡಿ- ದಶವಾರ್ಷಿಕ ತಾಜುಲ್ ಉಲಮಾ ಅನುಸ್ಮರಣೆಗೆ ಕ್ಷಣಗಣನೆ

ಬದ್ರಿಯಾ ಜುಮಾ ಮಸ್ಚಿದ್ ಕನ್ಯಾಡಿ, KMJ 𝙎Ⴤ𝙎 SSF ವತಿಯಿಂದ ಕನ್ಯಾಡಿ ಜುಮಾ ಮಸ್ಚಿದ್ ವಠಾರದಲ್ಲಿ ತಾಜುಲ್ ಉಲಮಾ ಅನುಸ್ಮರಣೆಯ ದಶವಾರ್ಷಿಕ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು(ಜ.10)ಚಾಲನೆ.

ಇಂದು ರಾತ್ರಿ ಪ್ರಭಾಷಣ ಜಗತ್ತಿನ ಧ್ರುವತಾರೆ, ಸಲೀಸಾಗಿ ಮನುಷ್ಯರ ಮನಸ್ಸುಗಳಿಗೆ ಮಾಧುರ್ಯ ನೀಡುವ ಮಧುರ ಸ್ವರದೊಂದಿಗೆ ಪ್ರಭಾಷಣಗೆಯ್ಯಬಲ್ಲ ಬಹು| ಹಂಝ ಮಿಸ್ಬಾಹಿ ಓಟಪದವು ಉಸ್ತಾದರ ಪ್ರೌಢಗಂಭೀರ ಭಾಷಣ ನಡೆಯಲಿದೆ.ಅಸ್ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶಿರ್ವಚನಕ್ಕೆ ನೇತೃತ್ವ ನೀಡಲಿದ್ದಾರೆ.

ನಾಳೆ ರಾತ್ರಿ, ಅಸ್ಸಯ್ಯಿದ್ ಬಾಯಾರ್ ತಂಙಳ್ ಕನ್ಯಾಡಿ ಮಣ್ಣಿಗೆ ಬರಲಿದ್ದಾರೆ.ಅವರ ದುಆ ಮಜ್ಲಿಸ್ ಮತ್ತು ಪ್ರಾರ್ಥನೆ ನಡೆಯಲಿದೆ.ಜತೆಗೆ ಕರ್ನಾಟಕದ ಸಭಾಪತಿ ಯುಟಿ ಖಾದರ್ ಸಾಬ್ ಆಗಮಿಸಲಿದ್ದಾರೆ.ಅಸ್ಸಯ್ಯಿದ್ ತ್ವಾಹ ತಂಙಳ್ ನೇತೃತ್ವದಲ್ಲಿ ಬೃಹತ್ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಕೂಡಾ ನಡೆಯಲಿದೆ. ಎರಡೂ ದಿನಗಳಲ್ಲಿ ತಾಜುಲ್ ಉಲಮಾ ಹೆಸರಿನಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ.

error: Content is protected !! Not allowed copy content from janadhvani.com