ನಜಫ್(ಇರಾಕ್): ಖ್ಯಾತ ವಿದ್ವಾಂಸ ಮತ್ತು ವಾಗ್ಮಿ ಫೈಸಲ್ ಫೈಝಿ ಕೂಡತಾಯಿ (49) ಇರಾಕ್‌ನ ಕೂಫಾದಲ್ಲಿ ನಿಧನರಾದರು.
ಝಿಯಾರತ್ ಟೂರಿನಲ್ಲಿ ಆಗಮಿಸಿದ್ದ ಅವರು, ಇರಾಕ್‌ನ ಬಾಗ್ದಾದ್‌ನಿಂದ ಕೂಫಾಗೆ ತೆರಳುವ ಮಧ್ಯೆ ಕೊನೆಯುಸಿರೆಳೆದರು. ಇಸ್ಲಾಮಿನ ನಾಲ್ಕನೇ ಖಲೀಫಾ ಅಲಿ (ರ.ಅ) ರವರ ಇಸ್ಲಾಮಿಕ್ ರಾಜಧಾನಿಯಾಗಿದ್ದ ಕೂಫಾದಲ್ಲಿ ಅತಿ ದೊಡ್ಡ ಮಸೀದಿ ಹಾಗೂ ವಿಶ್ವವಿದ್ಯಾಲಯ ಇದೆ. ಸಮೀಪದ ನಜಫ್ ನಲ್ಲಿ ಅಲಿ (ರ.ಅ) ರವರ ಮಖ್ಭರವಿದೆ.
ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಊರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವಾರದ ಹಿಂದೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಇರಾಕ್‌ಗೆ ತೆರಳಿದ್ದರು. ನಿನ್ನೆ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ.ಅವರ ಜನಾಝವನ್ನು ಕೂಫಾದಲ್ಲಿ ಸಮಾಧಿ ಮಾಡಲಾಗುವುದು.
ತಂದೆ: ಮೂಸಕುಟ್ಟಿ ಹಾಜಿ. ತಾಯಿ: ದಿವಂಗತ ಫಾತಿಮಾ ಹಜ್ಜುಮ್ಮ. ಪತ್ನಿ: ಮರಿಯತ್ ಮಡವೂರು. ಮಕ್ಕಳು: ಮೂಸಾ ತುಫೈಲ್, ಮಹಮ್ಮದ್ ದಾಖ್ ವಾನ್, ಹನಿಯಾ ಇನ್ಸಾನಾ, ಅದ್ನಾಂಜಿಯಾ. ಒಡಹುಟ್ಟಿದವರು: ಮುಹಮ್ಮದ್, ರಫೀಕ್ ಝಕರಿಯಾ ಫೈಝಿ ಕೂಡತಾಯಿ, ಸಲಾಂ, ಶೇಖ್ ಇಬ್ರಾಹಿಂ ಮುಂತಾದವರನ್ನು ಅಗಲಿದ್ದಾರೆ.