janadhvani

Kannada Online News Paper

ಹಳೆ ಪೆನ್ಷನ್ ಪದ್ಧತಿ ಜಾರಿಗೊಳಿಸುವಂತೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ

ಅರಸೀಕೆರೆ : ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಅರಸೀಕೆರೆ ಇವರ ವತಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ರೈಲ್ವೆ ಸ್ಟೇಷನ್ ಮುಂಭಾಗ ನಡೆಯಿತು. ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಕಾರ್ಯದರ್ಶಿ ಪ್ರಭು ಕುಮಾರ್ ಮಾತನಾಡಿ ಎಸ್ ಡಬ್ಲ್ಯೂ ಆರ್ ಮಜ್ದೂರ್ ಯೂನಿಯನ್ ವತಿಯಿಂದ 2004ರ ನಂತರ ನೇಮಕಾತಿಯಾದ ಎಲ್ಲಾ ರೈಲ್ವೆ ಕಾರ್ಮಿಕರಿಗೆ ಹೊಸ ಪೆನ್ಷನ್ ಪದ್ಧತಿಯನ್ನು ರದ್ದು ಮಾಡಿ ಹಳೆ ಪೆನ್ಷನ್ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಉಪಸತ್ಯಾಗ್ರವನ್ನು ಮಾಡುತ್ತಿದ್ದೇವೆ.

ಹೊಸ ಪೆನ್ಷನ್ ಪದ್ಧತಿಯಲ್ಲಿ ನೌಕರರಿಗೆ ಪೆನ್ಷನ್ ಪದ್ಧತಿಯಲ್ಲಿ ವ್ಯತ್ಯಾಸ ಆಗಿರುವುದರಿಂದ ನಾವುಗಳು ಹಳೆ ಪೆನ್ಷನ್ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಈಗಾಗಲೇ ನಮ್ಮ ರಾಜ್ಯಮಟ್ಟದ ನಾಯಕರುಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರು ಪ್ರಯೋಜನ ಆಗಿಲ್ಲ ಹಾಗಾಗಿ ಈಗ ಉಪಾಸತ್ಯಾಗ್ರವನ್ನು ಮಾಡುತ್ತಿದ್ದು ಸರದಿ ರೀತಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಬೆಳಗ್ಗೆ 9:00 ರಿಂದ ಸಂಜೆ ಐದರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದೇವೆ.

ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮಜ್ದೂರ್ ಯೂನಿಯನ್ ಅರಸೀಕೆರೆ ಶಾಖೆಯ ಅಧ್ಯಕ್ಷ ಆಲ್ಬರ್ಟ್ ಅನಿಲ್, ಓಪನ್ ಲೈನ್ ಶಾಖೆಯ ಅಧ್ಯಕ್ಷ ರಾಘವೇಂದ್ರ ಕೆ ಎಸ್ ಖಜಾಂಚಿ ಶಿವಶಂಕರ್, ಶಶಿಧರ್ ಕುಮಾರ್, ಶೇಷಾದ್ರಿ ಗಣೇಶ್ ವಿನಯ್ ಕುಮಾರ್ ಹರಿ ಮೋಹನ್ ಮೀನಾ ದಯಾನಂದ್ ಮುಂತಾದವರು ಭಾಗವಹಿಸಿದ್ದರು

error: Content is protected !! Not allowed copy content from janadhvani.com