janadhvani

Kannada Online News Paper

ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ಗೆ ನೂತನ ಸಾರಥ್ಯ

ಕಾವಳಕಟ್ಟೆ : ಉತ್ತರ ಪ್ರದೇಶದ ಲಕ್ನೋದ ಘೋಸಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಅತ್ಯುನ್ನತ ಧಾರ್ಮಿಕ ವಿದ್ಯಾನಿಲಯ ಜಾಮಿಆ ಅಮ್ಜದಿಯ್ಯ ದಲ್ಲಿ ಉನ್ನತ ವಿದ್ಯಾಭ್ಯಾಸ ಕಲಿತು ಬಿರುದುದಾರಿಗಳಾದ ಕರ್ನಾಟಕ ರಾಜ್ಯದ ಅಮ್ಜದಿಗಳ ಸಂಘಟನೆ ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ನ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು 2024 ಜನವರಿ 2 ಮಂಗಳವಾರ ದಂದು ಕಾವಳಕಟ್ಟೆ ಅಲ್ ಖಾದಿಸಾ ಸಂಸ್ಥೆಯ ಶರೀಅತ್ ಕಾಲೇಜು ಹಾಲ್ ನಲ್ಲಿ ಅಲ್ಲಿನ ಪ್ರಧಾನ ಮುದರ್ರಿಸ್ ಹಾಗೂ ರಾಜ್ಯ ಅಮ್ಜದೀಸ್ ಗೌರವ ಅಧ್ಯಕ್ಷರು ಆದ ಮೌಲಾನ ಯೂಸುಫ್ ರಝಾ ಅಮ್ಜದಿ ದಾವಣಗೆರೆ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು.

ಅಝೀಝ್ ರಝಾ ಅಮ್ಜದಿ ಅಧ್ಯಕ್ಷತೆ ವಹಿಸಿದ್ದರು. ಡಾಕ್ಟರ್ ಹನೀಫ್ ರಝಾ ಅಮ್ಜದಿ ಮುಖ್ಯ ಭಾಷಣ ಮಾಡಿದರು,
ನೂತನ ಅದ್ಯಕ್ಷರಾಗಿ ಎ ಕೆ ರಝಾ ಅಮ್ಜದಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಫಿಲ್ ಮುಈನುದ್ದೀನ್ ರಝಾ ಅಮ್ಜದಿ ಉಳ್ಳಾಲ, ಫೈನಾನ್ಸಿಯಲ್ ಕಾರ್ಯದರ್ಶಿಯಾಗಿ ಇಲ್ಯಾಸ್ ರಝಾ ಅಮ್ಜದಿ ಮಂಡೆಕೋಲು,
ಉಪಾದ್ಯಕ್ಷರುಗಳಾಗಿ ನಝೀರ್ ರಝಾ ಅಮ್ಜದಿ, ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ, ದಅವಾ ಕಾರ್ಯದರ್ಶಿಯಾಗಿ ಡಾಕ್ಟರ್ ಹನೀಫ್ ರಝಾ ಅಮ್ಜದಿ, ಮೀಡಿಯಾ ಕಾರ್ಯದರ್ಶಿ ಯಾಗಿ ಆಸಿಫ್ ರಝಾ ಅಮ್ಜದಿ ಹಾಗೂ ಹನ್ನೊಂದು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com