janadhvani

Kannada Online News Paper

ಸೌದಿ ಅರೇಬಿಯಾದ ಎಲ್ಲಾ ಕಟ್ಟಡಗಳಲ್ಲಿ ಹೊಗೆ ಶೋಧಕ ಕಡ್ಡಾಯ- ಸಿವಿಲ್ ಡಿಫೆನ್ಸ್

ಅಗ್ನಿ ಅನಾಹುತ ಸಂದರ್ಭದಲ್ಲಿ ಮುಂಚಿತವಾಗಿ ಎಚ್ಚರಿಕೆಯನ್ನು ಪಡೆಯಲು ಈ ಸಾಧನಗಳು ಉಪಕಾರಿಯಾಗಿದೆ.

ರಿಯಾದ್: ಮನೆಗಳು ಮತ್ತು ಸಂಸ್ಥೆಗಳಲ್ಲಿ ಹೊಗೆ ಶೋಧಕಗಳನ್ನು ಸ್ಥಾಪಿಸುವುದುವನ್ನು ಸೌದಿ ಸಿವಿಲ್ ಡಿಫೆನ್ಸ್ ಕಡ್ಡಾಯಗೊಳಿಸಿದೆ. ಅಗ್ನಿ ದುರಂತದಿಂದ ರಕ್ಷಿಸಲು ಈ ಮುನ್ನೆಚ್ಚರಿಕೆಗಳನ್ನು ಶಿಫಾರಸು ಮಾಡಲಾಗಿದೆ.

ದೇಶಾದ್ಯಂತ ಎಲ್ಲಾ ಮನೆಗಳು, ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು ಮತ್ತು ಕಾರ್ಖಾನೆಗಳಲ್ಲಿ ಹೊಗೆ ಶೋಧಕಗಳನ್ನು ಅಳವಡಿಸಬೇಕು. ಅಗ್ನಿ ಅನಾಹುತ ಸಂದರ್ಭದಲ್ಲಿ ಮುಂಚಿತವಾಗಿ ಎಚ್ಚರಿಕೆಯನ್ನು ಪಡೆಯಲು ಈ ಸಾಧನಗಳು ಉಪಕಾರಿಯಾಗಿದೆ. ಕಟ್ಟಡದ ಯಾವುದೇ ಭಾಗದಲ್ಲಿ ಬೆಂಕಿಯ ಅಪಾಯವಿದ್ದಲ್ಲಿ ಸ್ಮೋಕ್ ಡಿಟೆಕ್ಟರ್‌ಗಳು ಎಚ್ಚರಿಕೆ ನೀಡುತ್ತವೆ.

ಇದರಿಂದಾಗಿ ತಕ್ಷಣವೇ ಅಗ್ನಿ ದುರಂತದ ಎಚ್ಚರಿಕೆ ಲಭಿಸಲು ಮತ್ತು ಸಿವಿಲ್ ಡಿಫೆನ್ಸ್ ನ್ನು ರಕ್ಷಣಾ ಕಾರ್ಯಾಚರಣೆಗಾಗಿ ಕರೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ಪದೇ ಪದೇ ಸೂಚಿಸುತ್ತಿದ್ದು, ಯಾವುದೇ ಕಟ್ಟಡ ದೊಡ್ಡದು ಅಥವಾ ಚಿಕ್ಕದಾದರೂ ಸ್ಮೋಕ್ ಡಿಟೆಕ್ಟರ್ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ.

error: Content is protected !! Not allowed copy content from janadhvani.com