janadhvani

Kannada Online News Paper

ದೇಶೀಯ ಹಜ್ ಯಾತ್ರಿಕರ ನೋಂದಣಿ ಆರಂಭವಾಗಿಲ್ಲ- ಹಜ್,ಉಮ್ರಾ ಸಚಿವಾಲಯ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಳ್ಳುತ್ತಿರುವುದನ್ನು ಗಮನಿಸಿದ ಸಚಿವಾಲಯವು 'ಎಕ್ಸ್' ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ.

ರಿಯಾದ್: ಈ ವರ್ಷದ ಹಜ್ ಯಾತ್ರೆಗೆ ಸೌದಿ ಅರೇಬಿಯಾದಿಂದ ಯಾತ್ರಿಕರ ನೋಂದಣಿ ಪ್ರಾರಂಭವಾಗಿಲ್ಲ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವುದಾಗಿ ಸಚಿವಾಲಯ ಹೇಳಿದೆ. ಈ ವರ್ಷದ ಹಜ್‌ಗಾಗಿ ದೇಶೀಯ ಯಾತ್ರಾರ್ಥಿಗಳ ನೋಂದಣಿ ಪ್ರಾರಂಭವಾಗಿದೆ ಹಾಗೂ ಪ್ಯಾಕೇಜ್ ಗಳನ್ನು ಪ್ರಕಟಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಳ್ಳುತ್ತಿರುವುದನ್ನು ಗಮನಿಸಿದ ಸಚಿವಾಲಯವು ‘ಎಕ್ಸ್’ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ.

ಹಜ್ ನೋಂದಣಿ ಅಥವಾ ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಚಿವಾಲಯದ ಮಾಹಿತಿಯನ್ನು ಅದರ ಸ್ವಂತ ವೆಬ್‌ಸೈಟ್ ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಫಲಾನುಭವಿಗಳ ಆರೈಕೆ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಸಾರ್ವಜನಿಕರು ಸರಿಯಾದ ಮಾಹಿತಿಯನ್ನು ಪಡೆಯಬಹುದು.ಈ ಮೂಲಕ ಲಭಿಸುವ ಮಾಹಿತಿಯನ್ನು ಮಾತ್ರ ನಂಬುವಂತೆಯೂ, ಸುಳ್ಳು ಮಾಹಿತಿ, ಸುದ್ದಿ ಮತ್ತು ವಿಶ್ವಾಸಾರ್ಹವಲ್ಲದ ಮೂಲಗಳನ್ನು ಕಡೆಗಣಿಸವಂತೆಯೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com