janadhvani

Kannada Online News Paper

ಕುವೈಟ್: 30 ವರ್ಷ ದಾಟದ ವಿದೇಶೀಯರಿಗೆ ವೀಸಾ ನೀಡಲಾಗುವುದಿಲ್ಲ

ಕುವೈಟ್ ಸಿಟಿ : ಜುಲೈ 1ರಿಂದ ಕುವೈತ್ ನಲ್ಲಿ 30 ವರ್ಷ ಪೂರ್ತಿಯಾಗದ ಡಿಪ್ಲೊಮಾ ಹೊಂದಿರುವ ವಿದೇಶೀಯರಿಗೆ ವೀಸಾ ನೀಡಲಾಗುವುದಿಲ್ಲ ಎಂದು ಕುವೈತ್ ‌ನ ಮಾನವಸಂಪನ್ಮೂಲ ಪ್ರಾಧಿಕಾರ ಘೋಷಿಸಿದೆ. ಇದಕ್ಕೆ ಸಂಬಂಧಿಸಿದ ಸರ್ಕಾರಿ ಪ್ರಕಟಣೆ ಶೀಘ್ರದಲ್ಲೇ ಬರಲಿದೆ.ಆದರೆ, ಗೃಹ ಕಾರ್ಮಿಕರಿಗೆ  ಈ ವಯೋಮಿತಿ ಅನ್ವಯಿಸುವುದಿಲ್ಲ.

ಯುವಕರು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ದೇಶದಲ್ಲಿಯೇ ತರಬೇತಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಕುವೈತ್ ಗೆ ಆಗಮಿಸಬೇಕು ಎಂಬುದು ನಿರ್ಧಾರವಾಗಿದೆ.

ಪದವೀಧರರಾದ ನಂತರ, ಉದ್ಯೋಗಿಗಳು ಯಾವುದೇ ಅನುಭವವಿಲ್ಲದೇ ಕೆಲಸ ಮಾಡಬೇಕಾದ ಕೇಂದ್ರವನ್ನೇ ತರಬೇತಿ ಕೇಂದ್ರವಾಗಿ ಬಳಸುತ್ತಿದ್ದಾರೆ.ಕುವೈತ್ ‌ಗೆ ಬೇಕಾಗಿರುವುದು ಅನುಭವವುಳ್ಳ ವಿದ್ಯಾ ಸಂಪನ್ನ ರಾಗಿದ್ದಾರೆ ಎಂದು ಅಥಾರಿಟಿ ತಿಳಿಸಿದೆ.

ಸೆಂಟ್ರಲ್ ಸ್ಟಾಟಿಸ್ಟಿಕಲ್ ಬ್ಯೂರೊ ಆಫ್ ಕುವೈಟ್ ಇದರ ಹೊಸ ಲೆಕ್ಕಾಚಾರ ಪ್ರಕಾರ,2017 ರ ವೇಳೆಗೆ, ವಿದೇಶಿಯರ ಸಂಖ್ಯೆಯು 68,000 ಗಿಂತಲೂ ಹೆಚ್ಚಾಗಿದೆ.ಪ್ರಸಕ್ತ ವರ್ಷದ ಕಳೆದ ಮೂರು ತಿಂಗಳಲ್ಲಿ 10,704 ವಿದೇಶಿ ನೌಕರರು ದೇಶಕ್ಕೆ ಆಗಮಿಸಿದ್ದಾಗಿ ವರದಿ ತಿಳಿಸಿದೆ.

2017 ಡಿಸೆಂಬರ್ 31ರವರೆಗಿನ ಲೆಕ್ಕಾಚಾರ ಪ್ರಕಾರ ದೇಶದಲ್ಲಿ 20,34,285 ಕಾರ್ಮಿಕರಿದ್ದು, ಇವರ ಪೈಕಿ 3,96,265 ಸಾರ್ವಜನಿಕ ವಲಯದಲ್ಲಿಯೂ ಮತ್ತು 1,638,020 ಮಂದಿ ಖಾಸಗಿ ವಲಯದಲ್ಲಿದ್ದಾರೆ.
ದೇಶದಲ್ಲಿ ದೇಶೀಯ ಕಾರ್ಮಿಕರ ಸಂಖ್ಯೆಯು ವಿದೇಶೀ ಕಾರ್ಮಿಕರಿಗಿಂದ ಬಾರೀ ಕಡಿಮೆ ಇದೆ. ಈ ಕಾರಣಕ್ಕಾಗಿ, ದೇಶೀಯ ಪ್ರಜೆಗಳಿಗೆ ಉದ್ಯೋಗಾವಕಾಶವನ್ನು ನೀಡಲಾಗುತ್ತಿದೆ.

ಈದ್ ನಂತರ ಗೃಹ ಕಾರ್ಮಿಕರ ನೇಮಕಾತಿಯನ್ನು ಪುನರಾರಂಭಿಸಲಾಗುವುದು.
ಭಾರತದಿಂದ ಗೃಹ ನೌಕರರ ನೇಮಕಾತಿಯು ಹಬ್ಬದ ನಂತರ ಪುನರಾರಂಭಗೊಳ್ಳಲಿದೆ ಎಂದು ಕುವೈತ್ ಸರ್ಕಾರಿ ಸಂಸ್ಥೆ ಅಲ್ದುರ್ರ ನೇಮಕಾತಿ ಕಂಪೆನಿಯು ಹೇಳಿದೆ. ಈ ಕುರಿತು ಕುವೈತ್ ‌ನ ವಿದೇಶಾಂಗ ಸಚಿವಾಲಯ ಮತ್ತು ಭಾರತದ ವಿದೇಶಾಂಗ ಸಚಿವಾಲಯ ಮುಂದಿನ ವಾರ ಒಪ್ಪಂದಕ್ಕೆ ಸಹಿ ಹಾಕಲಿದೆ.ಭಾರತದಲ್ಲಿನ, ಸರ್ಕಾರಿ ಸಂಸ್ಥೆಗಳಿಗೆ ನೇಮಕಾತಿ ಜವಾಬ್ದಾರಿಯನ್ನು ನೀಡಲಾಗುತ್ತದೆ.

error: Content is protected !! Not allowed copy content from janadhvani.com