janadhvani

Kannada Online News Paper

ಜಿಲ್ಲೆಯಲ್ಲಿ ಕೋರೋನ ದೃಢ- ಆತಂಕ ಬೇಡ

ಚಿಕ್ಕಮಗಳೂರು ಜಿಲ್ಲೆಯ ನಾಲ್ವರಲ್ಲಿ ಕೋರೋನ ಧೃಡ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುವ ಕೇರಳ ಪ್ರವಾಸಿಗರಿಗೆ ನಿರ್ಬಂಧ ಹೇರಲು ಜಿಲ್ಲಾಡಳಿತ ಶೀಘ್ರ ಕ್ರಮ ವಹಿಸಬೇಕೆಂದು ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ ಜಿಲ್ಲಾಧ್ಯಕ್ಷರಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಒತ್ತಾಯಿಸಿದ್ದಾರೆ.

ಸಾರ್ವಜನಿಕರು ಭಯ ಪಡದೇ ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ ಈ ಹಿಂದೆ ಇಡೀ ವಿಶ್ವವೇ ಕೋರೋನ ಮಹಾಮಾರಿಗೆ ತುತ್ತಾಗಿ ಜನರು ರೋಗದ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದು ಕೊಂಡಿರುತ್ತಾರೆ ಟಿವಿ ಮಾಧ್ಯಮದಲ್ಲಿ ಬಿತ್ತರಿಸುವ ಕೋರೋನ ಅಂಕಿಅಂಶಗಳು ಮತ್ತು ಭಯ ಹುಟ್ಟಿಸುವ ಚಿತ್ರಣಗಳ ಪ್ರಸಾ ರದಿಂದ ಜನರಲ್ಲಿ ಭಯ ಉಂಟುಮಾಡುವ ಸನ್ನಿವೇಶಗಳು ಕೋರೋನಕ್ಕಿಂತಲೂ ಹೆಚ್ಚು ಮಾರಕವಾಗಿರುತ್ತದೆ ವಿಶೇಷವಾಗಿ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಆರೋಗ್ಯ ಸುರಕ್ಷಾ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು ಸೂಕ್ತ ಆರೋಗ್ಯ, ಸುರಕ್ಷೆ,ಚಿಕಿತ್ಸೆ,ಜಾಗೃತಿ,ರಕ್ಷಣೆ, ಇತ್ಯಾದಿ ಮಾನವ ಹಕ್ಕುಗಳು ಇವುಗಳ ಉಲ್ಲಂಘನೆಯಗದಂತೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕಾಗಿ ಮನವಿ ಮಾಡಲಾಗಿದೆ.

ಜನರಲ್ಲಿ ಜಿಲ್ಲೆಯಲ್ಲಿ ಜನಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವತಿಯಿಂದ ಅವಕಾಶ ಕಲ್ಪಿಸಿ ಕೊಡಲು ಮನವಿ ಮಾಡಲಾಗುವುದು ಎಂದು ರಜ್ವಿ ರವರು ತಿಳಿಸಿದ್ದಾರೆ.

ಅನಾರೋಗ್ಯದಿಂದಾಗಿ ಕೋರೋನ ರೋಗ ಲಕ್ಷಣಗಳು ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಸೂಕ್ತ ವ್ಯವಸ್ಥೆ ಮಾಡಲು ಅರೋಗ್ಯ ಇಲಾಖೆ ಸನ್ನದ್ಧರಾಗಿರಲು ಮಾನವ ಹಕ್ಕುಗಳ ಪರಿಷತ್ ಆಗ್ರಹಿಸುತ್ತದೆ ಜಿಲ್ಲೆಯ ಪ್ರವಾಸಿ ತಾಣಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ ಎಂದು ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾದ ಆರಿಫ್ ಅಲಿ ಖಾನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com