janadhvani

Kannada Online News Paper

ಸೌದಿ: ನಾಲ್ಕು ಕಂತುಗಳಲ್ಲಿ ಪಾವತಿ ಅನುಮತಿಸುವ ‘ತಮಾರ’- ವಿಳಂಬ ಶುಲ್ಕ ಸಂಪೂರ್ಣ ಮನ್ನಾ

ಸೌದಿ ಅರೇಬಿಯಾ ಮತ್ತು ಇತರ GCC ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಶಾಪಿಂಗ್ ಮತ್ತು ಪಾವತಿ ವೇದಿಕೆಯಾಗಿದೆ ತಮಾರಾ.

ರಿಯಾದ್- ಸೌದಿ ಅರೇಬಿಯಾವು ನಾಲ್ಕು ಕಂತುಗಳಲ್ಲಿ ಪಾವತಿಯನ್ನು ಅನುಮತಿಸುವ “ತಮಾರಾ” ಪಾವತಿ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಬಳಕೆದಾರರ ಅಭಿಪ್ರಾಯವನ್ನು ಗೌರವಿಸಿ ತಡವಾಗಿ ಕಂತುಗಳಲ್ಲಿ ವಿಧಿಸುವ ವಿಳಂಬ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಇದು ಶನಿವಾರದಿಂದಲೇ ಜಾರಿಗೆ ಬಂದಿದೆ. ಇಂದಿನಿಂದ ಹೊಸ ಆರ್ಡರ್‌ಗಳಿಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಸೂಚಿಸಿದೆ. ಸೌದಿ ಅರೇಬಿಯಾ ಮತ್ತು ಇತರ GCC ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಶಾಪಿಂಗ್ ಮತ್ತು ಪಾವತಿ ವೇದಿಕೆಯಾಗಿದೆ ತಮಾರಾ.

ನಾಲ್ಕು ಕಂತುಗಳಲ್ಲಿ ಬಿಲ್ ಮೊತ್ತವನ್ನು ಪಾವತಿಸುವ ಸೌಲಭ್ಯವು ವ್ಯಾಪಾರ ಕೇಂದ್ರಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿದೆ. 90 ಲಕ್ಷ ಬಳಕೆದಾರರನ್ನು ಮತ್ತು 26,000 ವ್ಯವಹಾರಗಳನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ.

error: Content is protected !! Not allowed copy content from janadhvani.com