janadhvani

Kannada Online News Paper

ಅಲ್ ಖಾದಿಸ ಯು.ಎ.ಇ‌ ರಾಷ್ಟ್ರೀಯ ಸಮಿತಿ ಗೆ ಆಯ್ಕೆ

ಅಲ್ ಖಾದಿಸ ಯು.ಎ.ಇ ರಾಷ್ಟ್ರೀಯ ಸಮಿತಿ ಮಹಾಸಭೆ ಮತ್ತು ಲೀಡರ್ಸ್ ಮೀಟ್ ಇತ್ತೀಚೆಗೆ ದುಬೈ ನ ಬಿಸ್ನೇಸ್ ಬೇ ನಲ್ಲಿರುವ ಬೇ ಬೈಟ್ಸ್ ರೆಸ್ಟೋರೆಂಟ್ ನ ಸಭಾಂಗಣದಲ್ಲಿ ಕಾವಲಕಟ್ಟೆ ಹಝ್ರತ್ ರವರ ನೇತೃತ್ವದಲ್ಲಿ ನಡೆಯಿತು.ಹಮೀದ್‌ ಸಅದಿ ಉಸ್ತಾದ್ ಈಶ್ವರಮಂಗಳ ಸಭೆ ಅಧ್ಯಕ್ಷತೆವಹಿಸಿದ್ದರು.

ಅಲ್ ಖಾದಿಸ ಕೋ ಅರ್ಡಿನೇಟರ್ ಖಲಂದರ್ ರಝ್ವಿ ಸ್ವಾಗತಿಸಿದ ಕಾರ್ಯಕ್ರಮವನ್ನು ಕೆ.ಸಿ.ಎಫ್ ಯುಎಇ ಸಮಿತಿ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು.

ಕಾವಲಕಟ್ಟೆ ಹಝ್ರತ್ ರವರ ಆತ್ಮೀಯ ಉಪದೇಶದ ನಂತರ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.

ನೂತನ ಸಮಿತಿ
ಅಧ್ಯಕ್ಷರು: ಹಮೀದ್ ಸಅದಿ ಉಸ್ತಾದ್ ಈಶ್ವರಮಂಗಳ
ಉಪಾಧ್ಯಕ್ಷರು: ಬಶೀರ್ ಹಾಜಿ ಬೊಳ್ವಾರ್
ರಝಾಕ್ ಹಾಜಿ ಜೆಲ್ಲಿ
ಬ್ರೈಟ್ ಇಬ್ರಾಹೀಂ ಹಾಜಿ
ಪ್ರಧಾನ ಕಾರ್ಯದರ್ಶಿ: ನಝೀರ್ ಹಾಜಿ ಕೆಮ್ಮಾರ
ಕಾರ್ಯದರ್ಶಿ: ಇಕ್ಬಾಲ್ ಕಾಜೂರು,ಶೌಖತ್ ಕೂಳೂರು
ಪೈನಾನ್ಸ್ ಕಂಟ್ರೋಲರ್:ಅಶ್ರಫ್ ಹಾಜಿ ಅಡ್ಯಾರ್
ಮತ್ತು 20 ಜನರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆಮಾಡಲಾಯಿತು