ಬಹರೈನ್: ನವೆಂಬರ್ 2023 ದಿನಾಂಕ 24/25/26 ದಿನಗಳಲ್ಲಿ ಮುಂಬೈ ಯಲ್ಲಿ ನಡೆಯುವ SSF INDIA GOLDEN FIFTY ಕಾರ್ಯಕ್ರಮದ ಪ್ರಚಾರಣಾರ್ಥ ಬಹರೈನಿಗೆ ಆಗಮಿಸಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಹು. ಹಾಫಿಲ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಉಸ್ತಾದರಿಗೆ KCF, ICF, RSC, ಸಂಘಟನೆಯ ಪ್ರಮುಖ ನೇತಾರರು ಬಹರೈನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛವನ್ನು ನೀಡಿ ಅದ್ದೂರಿಯ ಭವ್ಯ ಸ್ವಾಗತವನ್ನು ನೀಡಿದರು.
ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು, ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಸಂಘಟನಾ ಅಧ್ಯಕ್ಷ ಖಲಂದರ್ ಶರೀಫ್ ಕಕ್ಕೆಪದವು, ಕಾರ್ಯದರ್ಶಿ ಮನ್ಸೂರ್ ಬೆಳ್ಮ, ನೋರ್ತ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷ ಅಬೂಬಕರ್ ಮದನಿ, ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್, ಗುದೈಬಿಯಾ ಸೆಕ್ಟರ್ ಅಧ್ಯಕ್ಷ ಟಿ.ಎಂ. ಉಸ್ತಾದ್, ಕಾರ್ಯದರ್ಶಿ ಮುಹಮ್ಮದ್ ಅಲಿ ವೇಣೂರು, ಮುಹರ್ರಕ್ ಸೆಕ್ಟರ್ ಕಾರ್ಯದರ್ಶಿ ಮುಹಾಝ್ ಉಜಿರೆ, ಕೋಶಾಧಿಕಾರಿ ಹಾರಿಸ್ ಓಕ್ಕೆತ್ತೂರು, ಸಾಂತ್ವನ ಅಧ್ಯಕ್ಷ ಅಬ್ದುಲ್ ರಝಾಖ್ ಆನೆಕಲ್, ರಾಷ್ಟ್ರೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಫಝಲ್ ಸುರತ್ಕಲ್, ಅಶ್ರಫ್ ಕಿನ್ಯ, ಉಮ್ಮುಲ್ ಹಸ್ಸಂ ಸೆಕ್ಟರ್ ಸದಸ್ಯ ಹಾಗೂ ಖ್ಯಾತ ಬರಹಗಾರ ಇಕ್ಬಾಲ್ ಸಂಪೊಲಿ, ಸಲ್ಮಾಬಾದ್ ಸೆಕ್ಟರ್ ಸದಸ್ಯ ದರ್ವೇಶ್ ಅಲೀ ಮುಂತಾದವರು ಹಾಜರಿದ್ದರು.